ತಮಾಷೆಯಲ್ಲ...! ಪ್ರಶಸ್ತಿ ಪಡೆದ ಮರುದಿನವೇ ಲಂಚ ಪಡೆದು ಜೈಲು ಸೇರಿದ ತೆಲಂಗಾಣದ ಪೊಲೀಸ್ ಪೇದೆ!
ಹೈದರಾಬಾದ್[ಆ.18]: ಈ ಕಾಲದಲ್ಲಿ ಯಾರನ್ನು ನಂಬುವುದು ಎಂದೇ ಗೊತ್ತಾಗುವುದಿಲ್ಲ. ತೆಲಂಗಾಣದಲ್ಲಿ ಪೊಲೀಸ್ ಪೇದೆಯೊಬ್ಬನಿಗೆ ಆ.15ರಂದು ‘ಉತ್ತಮ ಕಾನ್‌ಸ್ಟೆಬಲ್’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.ಆದರೆ, ಪ್ರಶಸ್ತಿ ಮರುದಿನವೇ ಲಂಚ ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದಾನೆ.
ಮೆಹಬೂಬ್‌ನಗರ ಪೊಲೀಸ್ ಠಾಣೆಯ ಪೇದೆ ಪಲ್ಲೆ ತಿರುಪತಿ ರೆಡ್ಡಿ ಎಂಬಾತ ಮರಳು ಸಾಗಣೆಗಾಗಿ 17 ಸಾವಿರ ರು. ಹಣ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಪೇದೆಯನ್ನು ಎಸಿಬಿ ಕೋರ್ಟ್‌ಗೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ
