ನಿರುದ್ಯೋಗಿ, ರೈತರಿಗೆ ಕೇಂದ್ರದಿಂದ ಬಂಪರ್? ಲೋಕ ಚುನಾವಣೆಗೂ ಮುನ್ನ ಘೋಷಣೆ
ನವದೆಹಲಿ[ಜ.26]: ಮಧ್ಯಮ ವರ್ಗದ ಕೃಷಿಕರು, ಕೃಷಿ ಕಾರ್ಮಿಕರು, ನಗರ ಪ್ರದೇಶಗಳ ಅಸಂಘಟಿತ ಕಾರ್ಮಿಕರು, ನಿರುದ್ಯೋಗಿ ಯುವಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಬಂಪರ್ ಯೋಜನೆಗಳನ್ನು ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಈ ಘೋಷಣೆಗಳು ಒಂದೊಂದಾಗಿ ಪ್ರಕಟ ವಾಗಲಿದ್ದು, ನಿರುದ್ಯೋಗಿ ಯುವಕರಿಗೆ ಭತ್ಯೆ, ಖಾಸಗಿ ಕಂಪನಿಗಳಲ್ಲೂ ಮೀಸಲು ವ್ಯವಸ್ಥೆ ಮುಂತಾದವು ಕೂಡ ಇದರಲ್ಲಿ ಸೇರಿವೆ ಎನ್ನಲಾಗಿದೆ.
ಫೆ.೧ರ ಮಧ್ಯಂತರ ಬಜೆಟ್‌ಗೂ ಮುನ್ನ ಮತ್ತು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಯೋಜನೆಗಳು ಪ್ರಕಟವಾ ಗುವ ಸಾಧ್ಯತೆಯಿದೆ. ಜ.30ರಿಂದ ಅಧಿ ವೇಶನ ನಡೆಯಲಿದ್ದು, ಫೆ.13ಕ್ಕೆ ಮುಕ್ತಾ ಯಗೊಳ್ಳಲಿದೆ. ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟಿಸುವ ನಿರೀಕ್ಷೆಯಿದೆ. ಹೀಗಾಗಿ ಅದಕ್ಕೂ ಮುನ್ನ ಸಂಕಷ್ಟದಲ್ಲಿರುವ ಬೇರೆ ಬೇರೆ ವಲಯದ ಜನರಿಗೆ ಪ್ರತ್ಯೇಕವಾಗಿ ಬಂಪರ್ ಯೋಜನೆಗಳು ಪ್ರಕಟವಾಗಲಿವೆ. ಬಡ ವರ್ಗದವರಿಗಾಗಿ ರೂಪಿಸುವ ಕೆಲ ಯೋಜನೆಗಳನ್ನು ತಕ್ಷಣವೇ ಅನುಷ್ಠಾನ ಮಾಡಲಾಗುತ್ತದೆ.
ಅಲ್ಲದೆ, ಇನ್ನಿ ತರ ಕೆಲ ಯೋಜನೆಗಳಿಗೆ ಕಾಯ್ದೆ ರೂಪಿ ಸುವ ಅಗತ್ಯವಿದ್ದು, ಅವು ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೆ ಬರಬಹುದು ಎನ್ನಲಾಗಿದೆ. ಸರ್ಕಾರಿ ನೌಕರಿ ಹಾಗೂ ಶಿಕ್ಷಣದಲ್ಲಿ ಸಾಮಾನ್ಯ ವರ್ಗ ದವರಿಗೆ ಶೇ.10 ಮೀಸಲನ್ನು ಈಗಾಗಲೇ ಸರ್ಕಾರ ಜಾರಿಗೊಳಿಸಿದ್ದು, ಚುನಾವಣೆ ಗೂ ಮುನ್ನ ಖಾಸಗಿ ಕಂಪನಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಸಾಮಾನ್ಯ ವರ್ಗದ ಬಡವರಿಗೆ ಶೇ.೧೦ರಷ್ಟು ಮೀಸಲು ಜಾರಿಗೊಳಿಸುವ ಸಾಧ್ಯತೆಯಿದೆ. ಈ ಎಲ್ಲ ಯೋಜನೆಗಳಿಗಾಗಿ ಕೇಂದ್ರದ ಉನ್ನತ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ 4 ಸಚಿವಾಲಯಗಳ ಅಧಿಕಾರಿಗಳು ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 26, 2019, 1:30 PM IST