ಆರೋಗ್ಯವಂತ ಮಗುವಿಗಾಗಿ ಮಹಿಳೆಯರು ಗರ್ಭ ನಿಂತಾಗ ಮಾಂಸ ಸೇವಿಸಬಾರದುಸೆಕ್ಸ್'ನಿಂದ ದೂರವಿರಬೇಕು, ಆಧ್ಯಾತ್ಮಿಕ ವಿಚಾರದಲ್ಲಿ ತೊಡಗಬೇಕು ಎಂದು ಸಲಹೆಬೆಡ್'ರೂಮ್'ನಲ್ಲಿ ಸುಂದರ ಮತ್ತು ಉತ್ತಮವಾದ ಪೋಸ್ಟರ್ ಗಳನ್ನು ಹಾಕುವುದು ಉತ್ತಮಆಯುಷ್ ಇಲಾಖೆಯ ಸಲಹೆ ಅವೈಜ್ಞಾನಿಕವಾಗಿದೆ ಎಂದ ಕೆಲವು ವೈದ್ಯರು
ನವದೆಹಲಿ: ಗರ್ಭಿಣಿ ಮಹಿಳೆಯರು ಮಾಂಸ ಮತ್ತು ಸೆಕ್ಸ್'ನಿಂದ ದೂರವಿರಬೇಕು ಎಂದು ಕೇಂದ್ರ ಆಯುಷ್ ಇಲಾಖೆ ಸಲಹೆ ನೀಡಿದೆ.
ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯುಷ್ ಸಚಿವಾಲಯ ತಾಯಿ ಮತ್ತು ಮಕ್ಕಳ ರಕ್ಷಣೆ ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಮಾಂಸಾಹಾರ ತ್ಯಜಿಸಿ ಗರ್ಭಧಾರಣೆ ಬಳಿಕ ಸಂಭೋಗ ಬೇಡ ಎಂದು ಸಲಹೆ ನೀಡಲಾಗಿದೆ.
ಭಾರತದಲ್ಲಿ ಪ್ರತಿ ವರ್ಷ 21 ಮಿಲಿಯನ್ ಮಕ್ಕಳು ಜನಿಸುತ್ತಾರೆ. ಆರೋಗ್ಯವಂತ ಮಗುವಿಗಾಗಿ ಮಹಿಳೆಯರು ಗರ್ಭ ನಿಂತ ಕೂಡಲೇ ಮಾಂಸ ಸೇವಿಸುವುದನ್ನು ನಿಲ್ಲಿಸಬೇಕು ಮತ್ತು ಸೆಕ್ಸ್ ನಿಂದ ದೂರವಿದ್ದು, ಆಧ್ಯಾತ್ಮಿಕ ವಿಚಾರದಲ್ಲಿ ತೊಡಗಬೇಕು ಎಂದು ಸೂಚಿಸಲಾಗಿದೆ.
ತಾಯಿ ಮತ್ತು ಮಕ್ಕಳ ರಕ್ಷಣೆ ಎಂಬ ಕಿರು ಪುಸ್ತಕವನ್ನು ಆಯುಷ್ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಬಿಡುಗಡೆ ಮಾಡಿದ್ದು, ಬೆಡ್'ರೂಮ್ ನಲ್ಲಿ ಸುಂದರ ಮತ್ತು ಉತ್ತಮವಾದ ಪೋಸ್ಟರ್ ಗಳನ್ನು ಹಾಕುವುದು ಉತ್ತಮ ಎಂದು ಕಿರು ಪುಸ್ತಕದಲ್ಲಿ ಹೇಳಲಾಗಿದೆ.
ಆದರೆ, ಈ ಆಯುಷ್ ಇಲಾಖೆ ಸೂಚಿಸಿರುವ ಎಲ್ಲ ಶಿಫಾರಸುಗಳು ಅವೈಜ್ಞಾನಿಕವಾಗಿದೆ ಕೆಲವು ವೈದ್ಯರು ವಿರೋಧಿಸಿದ್ದಾರೆ. ಗರ್ಭಿಣಿ ಮಹಿಳೆಯರು ಮಾಂಸ ತಿನ್ನಬಾರದು ಎನ್ನುವುದು ಅವೈಜ್ಞಾನಿಕ. ಪ್ರೋಟೀನ್- ಅಪೌಷ್ಟಿಕತೆ ಕೊರತೆ ಮತ್ತು ರಕ್ತಹೀನತೆ ನಿವಾರಣೆಗೆ ಗರ್ಭಿಣಿಯರು ಮಾಂಸ ತಿನ್ನಬೇಕು. ಪ್ರೋಟೀನ್ ಮತ್ತು ಕಬ್ಬಿಣ ಅಂಶಕ್ಕೆ ಮಾಂಸ ಉತ್ತಮ ಮೂಲವಾಗಿದೆ. ಇದು ತರಕಾರಿಗಳಿಂದ ಸಿಗುವುದಿಲ್ಲ ಎಂದಿದ್ದಾರೆ.
ಆಯುಷ್ ಸೂಚಿಸಿರುವ ಮಾರ್ಗಗಳನ್ನು ಅನುಸರಿಸುವುದಕ್ಕಿಂತ ಗರ್ಭ ಧರಿಸಿದ ಮಹಿಳೆ ತನಿಗಿಷ್ಟವಾದ ರೀತಿಯಲ್ಲಿ ಸಂತೋಷವಾಗಿರಬೇಕು ಅಂತ ವೈದ್ಯರು ತಿಳಿಸಿದ್ದಾರೆ.
