ಜಗತ್ತಿನಾದ್ಯಂತ ಸರ್ಜಿಕಲ್ ದಾಳಿ ಬಗ್ಗೆ ವಿಶ್ಲೇಷಣೆ, ಅಧ್ಯಯನ, ಪ್ರಶಂಸೆ ಹಾಗೂ ಚರ್ಚೆಗಳಾಗುತ್ತಿದೆ. ಆದರೆ ಭಾರತದಲ್ಲೇ ಕೆಲವರು ಅದರ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಅಂಥವರ ಕೈಗೆ ಎಂದಿಗೂ ಅಧಿಕಾರ ನೀಡಬಾರದೆಂದು ಮೊದಿ ಹೇಳಿದ್ದಾರೆ.

ಮೀರಠ್ (ಫೆ.04): ಉತ್ತರ ಪ್ರದೇಶದಲ್ಲಿ ಚುನಾವಣಾ ಸಭೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ SCAM (ಹಗರಣಗಳಿಗೆ) ಹೊಸ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಕಾಮ್ ಎಂದರೆ S- ಸಮಾಜವಾದಿ ಪಕ್ಷ, C- ಕಾಂಗ್ರೆಸ್, A-ಆಖಿಲೇಶ್ ಯಾದವ್M-ಮಾಯಾವತಿ ಎಂದು ಮೀರಠ್’ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಾರೆ.

ಜಗತ್ತಿನಾದ್ಯಂತ ಸರ್ಜಿಕಲ್ ದಾಳಿ ಬಗ್ಗೆ ವಿಶ್ಲೇಷಣೆ, ಅಧ್ಯಯನ, ಪ್ರಶಂಸೆ ಹಾಗೂ ಚರ್ಚೆಗಳಾಗುತ್ತಿದೆ. ಆದರೆ ಭಾರತದಲ್ಲೇ ಕೆಲವರು ಅದರ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಅಂಥವರ ಕೈಗೆ ಎಂದಿಗೂ ಅಧಿಕಾರ ನೀಡಬಾರದೆಂದು ಮೊದಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬದಲಾವಣೆ ಕಾಣಬೇಕಾದರೆ ಮೊದಲು ಇಲ್ಲಿನ ಸರ್ಕಾರವನ್ನು ಬದಲಿಸಬೇಕು ಎಂದು ಮೋದಿ ಹೇಳಿದ್ದಾರೆ.