ಮೂಡಲಗಿ (ಮೇ. 30): ಮೋದಿ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತಿದ್ದ ಮೋದಿ ಅಭಿಮಾನಿಯೊಬ್ಬ ಗಾಜಿನ ಮೇಲೆ ನಡೆಯುವ ಮೂಲಕ ಹರಕೆ ತೀರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಬುಧವಾರ ನಡೆದಿದೆ. 

ಮೂಡಲಗಿ ನಿವಾಸಿ ಸುರೇಶ ಬೆಳವಿ (38) ಹರಕೆ ತೀರಿಸಿದ ಮೋದಿ ಅಭಿಮಾನಿ. ಈ ಅಭಿಮಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಪ್ರಮಾಣವಚನ
ಸ್ವೀಕರಿಸುವ ಮುನ್ನಾ ದಿನದ ಮುಂಚೆಯೇ ಸ್ಥಳೀಯ ಎಸ್‌ಎಸ್‌ಆರ್ ಕಾಲೇಜು ಆವರಣದಲ್ಲಿ ಒಡೆದ ಗಾಜಿನ ಮೇಲೆ ನಡೆದು ಹರಕೆ ತೀರಿಸಿದ್ದಾರೆ.