‘ವಿಶ್ವದ ಅತಿ ದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆ’ ಎನ್ನಿಸಿಕೊಂಡಿರುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (ಮೋದಿ ಕೇರ್)ಯನ್ನು ಮುಂದಿನ ವಿತ್ತೀಯ ವರ್ಷದಿಂದ (18-19) ಜಾರಿಗೆ ತರುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ: ‘ವಿಶ್ವದ ಅತಿ ದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆ’ ಎನ್ನಿಸಿಕೊಂಡಿರುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (ಮೋದಿ ಕೇರ್)ಯನ್ನು ಮುಂದಿನ ವಿತ್ತೀಯ ವರ್ಷದಿಂದ (18-19) ಜಾರಿಗೆ ತರುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ 2018ರ ಆ.15 ಅಥವಾ ಅ.2ರಂದು ಯೋಜನೆ ಜಾರಿಯಾಗುವ ಸಾಧ್ಯತೆ ಇದೆ.

ಬಡತನ ರೇಖೆಗಿಂತ ಕೆಳಗಿರುವ ದೇಶದ 50 ಕೋಟಿ ಜನರಿಗೆ ಜೀವದಾನ ನೀಡಬಲ್ಲಂಥ ಮಹತ್ವ ಪೂರ್ಣ ಯೋಜನೆಯೊಂದನ್ನು ಕೇಂದ್ರ ಸರ್ಕಾರ, ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಪ್ರಕಟಿಸಿತ್ತು.