ಸುಗ್ಗಿ ಹಬ್ಬವನ್ನು ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಅನೇಕರು ವಿಧವಿಧವಾಗಿ ಶುಭ ಕೋರಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಕನ್ನಡದಲ್ಲಿಯೇ ಟ್ವೀಟ್ ಮಾಡಿ, ಶುಭ ಕೋರಿದ್ದಾರೆ.

ಬೆಂಗಳೂರು: ಸುಗ್ಗಿ ಹಬ್ಬವನ್ನು ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಅನೇಕರು ವಿಧವಿಧವಾಗಿ ಶುಭ ಕೋರಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಕನ್ನಡದಲ್ಲಿಯೇ ಟ್ವೀಟ್ ಮಾಡಿ, ಶುಭ ಕೋರಿದ್ದಾರೆ.

'ಸಮಸ್ತ ಕನ್ನಡಿಗರಿಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ಸುಗ್ಗಿ ಹಬ್ಬ ಎಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ ಎಂದು ನಾನು ಹಾರೈಸುತ್ತೇನೆ,' ಎಂದು ಮೋದಿ ಶುಭ ಕೋರಿದ್ದಾರೆ.

Scroll to load tweet…

Scroll to load tweet…

Scroll to load tweet…

;

'ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು, ಕಂಡ ಕನಸು ನನಸಾಗಲಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು,' #HappySankranthi ಎಂದು ರಾಹುಲ್ ಶುಭ ಹಾರೈಸಿದ್ದಾರೆ.

Scroll to load tweet…

ಮಕರ ಸಂಕ್ರಾಂತಿ ಶುಭಾಶಯಗಳೆಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಹೇಳಿದ್ದಾರೆ,

'ಎಳ್ಳು ಬೆಲ್ಲದ 'ಸವಿ', ಕಬ್ಬಿನ 'ಸಿಹಿ' ಹೊಸ ಚೈತನ್ಯ ತರಲಿ, ಶಾ೦ತಿ, ಸಮೃದ್ಧಿ, ಸೌಹಾದ೯ತೆಯನ್ನು ಇಮ್ಮಡಿಸಲಿ, ನವಪಥದಲ್ಲಿರುವ ಸೂಯ೯ ಅಭಿವೃದ್ಧಿಯ ಕ್ರಾ೦ತಿ ಬೆಳಗಿಸಲಿ,' ಎಂದು ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.

'ಕಬ್ಬಿನ ಸಿಹಿಯನ್ನು ಹೀರುತ್ತಾ, ಎಳ್ಳು ಬೆಲ್ಲಾ ಸವಿಯುತ್ತಾ ಸವಿ ಮಾತುಗಳಿಂದ ವರ್ಷದ ಮೊದಲನೇ ಹಬ್ಬವನ್ನು ಸ್ವಾಗತಿಸೋಣ,' ಎಂದು ನಟ ತೂಗುದೀಪ ದರ್ಶನ್ ಶುಭ ಹಾರೈಸಿದ್ದಾರೆ.