ನವದೆಹಲಿ[ಸೆ.06]: ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರಕ್ಕೆ ಶನಿವಾರ 100 ದಿನ ತುಂಬಲಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದ ದೇಶವ್ಯಾಪಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಲು ಪಕ್ಷ ನಿರ್ಧರಿಸಿದೆ.

ಟೀಂ ಮೋದಿ ಸಂಪುಟದಲ್ಲಿ 19 ಹೊಸ ಮುಖಗಳು

ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ಸಂಸತ್‌ ಅಧಿವೇಶನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದು, ದಿವಾಳಿ ತಡೆ ಸಂಹಿತೆ ಕಾಯ್ದೆ ಜಾರಿ ತ್ರಿವಳಿ ತಲಾಖ್‌ ನಿಷೇಧ ಕಾಯ್ದೆ ಅಂಗೀಕಾರ, ಆಧಾರ್‌ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಖಾಸಗಿ ಉದ್ಯಮಗಳೂ ಅದನ್ನು ಬಳಸಲು ಅವಕಾಶ ಮಾಡಿಕೊಟ್ಟಿದ್ದು, ಕಾರ್ಮಿಕ ನೀತಿ ಸಂಹಿತೆ ಜಾರಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು, ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದು, ಭಯೋತ್ಪಾದನೆ ನಿಗ್ರಹ ಕಾಯ್ದೆಯನ್ನು ಮತ್ತಷ್ಟುಕಠಿಣಗೊಳಿಸಿದ್ದು, ಪಾಕಿಸ್ತಾನ ಬಾಲಾಕೋಟ್‌ ಉಗ್ರ ನೆಲೆಗಳ ಮೇಲೆ ದಾಳಿ, ಪ್ರಮುಖ ಸಾಧನೆಗಳಾಗಿದ್ದರೆ.

ಗುಡಿಸಲಿನಲ್ಲಿ ವಾಸಿಸುವ ಸಂಸದನಿಗೆ ಮಂತ್ರಿ ಹುದ್ದೆ!

ಆರ್ಥಿಕ ಹಿಂಜರಿತ, ಉದ್ಯೋಗ ಕುಸಿತ ಸರ್ಕಾರವನ್ನು ಬಹುವಾಗಿ ಕಾಡಿದ ಸಮಸ್ಯೆಗಳಾಗಿವೆ.