ನವದೆಹಲಿ[ಮೇ.31]: ಒಡಿಶಾದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆ ಯಾದ ಪ್ರತಾಪ್ ಚಂದ್ರ ಸಾರಂಗಿ ಅವರು ಮೋದಿ ಸರ್ಕಾರ ದಲ್ಲಿ ಮಂತ್ರಿಯಾಗಿದ್ದಾರೆ.ವಿಶೇಷವೆಂದರೆ ಇವರು ತಮ್ಮ ಸರಳ ಜೀವನದಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಗುಡಿಸಲಿನಂತಹ ಸಣ್ಣ ಮನೆಯಲ್ಲಿ ವಾಸಿಸುವ ಇವರು ಸೈಕಲ್‌ನಲ್ಲಿ ಓಡಾಡುತ್ತಾರೆ. ಕೊಳವೆ ಬಾವಿಯ ನೀರಿನಲ್ಲೇ ಸ್ನಾನ ಮಾಡುತ್ತಾರೆ. ಸೈಕಲ್ ಮೂಲಕವೇ ಹಳ್ಳಿ ಹಳ್ಳಿಗೆ ಹೋಗಿ ಮತಯಾಚಿಸಿದ್ದರು.

ಗುಡಿಸಲಲ್ಲಿ ವಾಸ ಮಾಡುವ ಸನ್ಯಾಸಿ ಈಗ ಬಿಜೆಪಿ ಎಂಪಿ

ತಮ್ಮ ಸರಳ ಜೀವನದಿಂದಲೇ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ಅವರು ಒಡಿಶಾದ ಬಾಲಾಸೋರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ.