ಪುರುಷರಿಗೆ ಸೆಕ್ಸ್ ಪಾಠ ಹೇಳಿಕೊಡುತ್ತೇನೆಂದ ಮಾಡಲ್ ಗತಿ ಏನಾಯಿತು ಗೊತ್ತಾ ? ಖ್ಯಾತರೊಂದಿಗೆ ಈಕೆಗೆ ಸಂಪರ್ಕ ?

Model arrested for offering sex lessons
Highlights

ಕೊಠಡಿಯಲ್ಲಿ ಸೆಕ್ಸ್'ನ ವಿಚಿತ್ರ ಶಬ್ದಗಳು ಕೇಳಿಸಿಕೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ ಬಂಧನವಾಗಲು ನೆರವಾಗಿದ್ದಾರೆ.

ಪುರುಷ ಪ್ರವಾಸಿಗರಿಗೆ ಸೆಕ್ಸ್ ಪಾಠ ಹೇಳಿಕೊಡುತ್ತೇನೆಂದ 21 ವರ್ಷದ ಮಾಡಲ್ ಒಬ್ಬಳನ್ನು ಥೈಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ.

ಅನಸ್ತಾಸಿಯಾ ವಶುಕೆವಿಚ್ ಬಂಧಿತ ಮಾಡಲ್. ಇದೇ ಸಂಬಂಧವಾಗಿ ಯಾವುದೇ ಪರವಾನಗಿಯಿಲ್ಲದೆ ವಿಸಾ ಅವಧಿ ಮುಗಿದಿದ್ದರೂ ಕಾರ್ಯನಿರ್ವಹಿಸುತ್ತಿದ್ದ 10 ಮಂದಿಯನ್ನು ವಲಸೆ ಇಲಾಖೆಯ ಪೊಲೀಸರು ಬಂಧಿಸಿದ್ದಾರೆ. ಸೆಕ್ಸ್ ಪಾಠ ಕೇಳಲು 40 ರಷ್ಯನ್ ಪ್ರವಾಸಿಗರು ಆಗಮಿಸಿದ್ದು ಬಹುತೇಕರು ಸೆಕ್ಸ್ ಅನಿಮೇಟರ್ ಭಾವಚಿತ್ರವುಳ್ಳ ಟಿ-ಶರ್ಟ್ ಧರಿಸಿದ್ದರು.

ಕೊಠಡಿಯಲ್ಲಿ ಸೆಕ್ಸ್'ನ ವಿಚಿತ್ರ ಶಬ್ದಗಳು ಕೇಳಿಸಿಕೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ ಬಂಧನವಾಗಲು ನೆರವಾಗಿದ್ದಾರೆ. ಬಂಧಿತ ಮಾಡಲ್ ತನ್ನ ಅಸಾಧಾರಣ ಸೆಲ್ಫಿ'ಗಳಿಂದ  ಇಂಟರ್'ನೆಟ್'ಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿಕೊಂಡು ಖ್ಯಾತಳಾಗಿದ್ದಳು.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯನ್ ಬಿಲೇನಿಯರ್'ಗಳೊಂದಿಗೆ ಸಂಪರ್ಕವಿದ್ದರ ಸುದ್ದಿಗಳನ್ನು ಬಿಚ್ಚಿಡುತ್ತೇನೆ ಎಂದು ಕೆಲ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಳು. ಇದರಿಂದಾಗಿ ನನಗೆ ಜೀವ ಭಯವಿದೆ ಎಂದು ತಿಳಿಸಿದ್ದಳು. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

loader