ನವೆಂಬರ್‌ ಕೊನೆಯ ವಾರದಲ್ಲಿ ಸಂವಿಧಾನ ಪೀಠವು ಆಧಾರ್‌ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿ ಪೀಠವೇ ಈ ವಿಷಯದಲ್ಲೂ ನಿರ್ಧಾರ ಕೈಗೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ನವದೆಹಲಿ(ನ.03): ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವುದಿಲ್ಲ ಎಂದಿರುವ ಸುಪ್ರೀಂ ಕೋರ್ಟ್ ಸಾರ್ವಜನಿಕರಿಗೆ ಬರುತ್ತಿರುವ ಕೊನೆಯ ದಿನಾಂಕದ ಬೆದರಿಕೆ ಸಂದೇಶಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಕೊನೆಯ ದಿನಾಂಕವನ್ನು ತಿಳಿಸುವಂತೆ ಸೂಚಿಸಿದೆ.

ಆಧಾರ್ ಪ್ರಕರಣದ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನವೆಂಬರ್‌ ಕೊನೆಯ ವಾರದಲ್ಲಿ ಸಂವಿಧಾನ ಪೀಠವು ಆಧಾರ್‌ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿ ಪೀಠವೇ ಈ ವಿಷಯದಲ್ಲೂ ನಿರ್ಧಾರ ಕೈಗೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ಬ್ಯಾಂಕ್ ಖಾತೆಯನ್ನು ಮೊಬೈಲ್ ಸಂಖ್ಯೆ'ಗೆ ಜೋಡಣೆ ಮಾಡುವುದಕ್ಕೆ ಡಿಸೆಂಬರ್ 31, 2017 ಹಾಗೂ ಫೆಬ್ರವರಿ 6, 2018 ಕೊನೆಯ ದಿನಾಂಕ ಎಂದು ಬ್ಯಾಂಕ್ ಹಾಗೂ ಟೆಲಿಕಾಂ ಸೇವಾ ಕಂಪನಿಗಳು ಸಂದೇಶ ಕಳಿಸುತ್ತಿವೆ. ಒಂದು ನಿರ್ಧಾರಿದ ಕೊನೆಯ ದಿನಾಂಕವನ್ನು ತಿಳಿಸುವಂತೆ ಕೋರ್ಟ್ ಸೂಚಿಸಿದೆ. ಕೆಲ ಸಾಮಾಜಿಕ ಸಂಘಟನೆಗಳು ಆದಾರ್'ಗೆ ಬ್ಯಾಂಕ್ ಹಾಗೂ ಮೊಬೈಲ್ ಸಂಖ್ಯೆಯನ್ನು ಜೋಡಿಸುವ ಕ್ರಮವು ಅಕ್ರಮ ಹಾಗೂ ಅಸಂವಿಧಾನಿಕ ಎಂದು ಸುಪ್ರಿಂ ಕೋರ್ಟ್'ಗೆ ಅರ್ಜಿ ಸಲ್ಲಿಸಿವೆ.