ಮುಂಬೈ (ಸೆ.10): ತನ್ನಿಂದ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾರ್ಯಕರ್ತರು (ಎಂಎನ್ ಎಸ್) ಲಂಚವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ ಕಾಮಿಡಿಯನ್ ಕಪಿಲ್ ಶರ್ಮಾ ಕ್ಷಮೆ ಕೇಳಬೇಕೆಂದು ಎಂಎನ್ ಎಸ್ ಆಗ್ರಹಿಸಿದೆ. ಒಂದು ವೇಳೆ ಕಪಿಲ್ ಶರ್ಮಾ ಕ್ಷಮೆ ಕೇಳದಿದ್ದರೆ ಅವರ ಶೋವನ್ನು ಶೂಟಿಂಗ್ ಮಾಡಲು ಬಿಡುವುದಿಲ್ಲವೆಂದು ಎಂಎನ್'ಎಸ್ ಹೇಳಿದೆ.

Add Asianetnews Kannada as a Preferred SourcegooglePreferred

ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಪಿಲ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರ ಹೇಳಿಕೆಗೆ ಬೆಂಬಲ ನೀಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೂ ಸಹ ಎಂಎನ್ ಎಸ್ ನಾಯಕಿ ಶಾಲಿನಿ ಠಾಕ್ರೆ ಗುಡುಗಿದ್ದಾರೆ.

ಕಪಿಲ್ ಶರ್ಮಾ ಕಾನೂನುಬಾಹಿರವಾಗಿ ನಾಲ್ಕಂಸ್ಥಿನ ಮನೆ ಕಟ್ಟುತ್ತಿದ್ದಾರೆ. ಮನೆ ಕಟ್ಟುತ್ತಿರುವ ಜಾಗ ಮ್ಯಾಂಗ್ರೋವ್ ಕಾಡುಗಳನ್ನು ಬೆಳೆಸಲು ಮೀಸಲಾಗಿದೆ. ಅದನ್ನ ನೀವು ಮುಟ್ಟಲಾಗುವುದಿಲ್ಲ. ಆ ಜಾಗವನ್ನು ಅತಿಕ್ರಮಿಸಲು ಮುಂದಾದರೆ ನಿಮ್ಮನ್ನು ಬಂಧಿಸಲಾಗುವುದು. ಇದಕ್ಕೆ ಹೇಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮೊದಲು ಗೊತ್ತಾಗಬೇಕು ಎಂದು ಶಾಲಿನಿ ಠಾಕ್ರೆ ತಿಳಿಸಿದ್ದಾರೆ.