ಮುಂಬೈ(ಡಿ.12): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುಗಿಯುತ್ತಿದ್ದಂತೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏಕಾಏಕಿ ಲೈಮ್‌ಲೈಟ್‌ಗೆ ಬಂದು ಬಿಟ್ಟಿದ್ದಾರೆ.

ಇಷ್ಟು ದಿನ ರಾಹುಲ್ ಕಾಯರ್ಯವೈಖರಿಯನ್ನು ತೆಗಳುತ್ತಿದ್ದ ವಿರೋಧಿಗಳು, ಇದೀಗ ರಾಹುಲ್ ಅವರ ಕಾರ್ಯಕ್ಷಮತೆಯನ್ನು ಹಾಡಿ ಹೊಗಳುತ್ತಿದ್ದಾರೆ. ರಾಹುಲ್ ಹೊಗಳುವವರ ಸಾಲಿಗೆ ಇದೀಗ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಸೇರಿದ್ದಾರೆ.

ಹೌದು, ಪಂಚ ರಾಜ್ಯಗಳ ವಿಧಾನಸಭೆ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ ಠಾಕ್ರೆ, ಇಷ್ಟು ದಿನ ಪಪ್ಪು ಎಂದು ಕರೆಸಿಕೊಳ್ಳುತ್ತಿದ್ದವರು ಇದೀಗ ಪರಮ ಪೂಜ್ಯರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗುಜರಾತ್, ಕರ್ನಾಟಕದಲ್ಲಿ ಏಕಾಂಗಿಯಾಗಿ ಹೋರಾಡಿದಂತೆ ರಾಹುಲ್ ಈ ಬಾರಿಯೂ ಅತ್ಯಂತ ಧೈರ್ಯದಿಂದ ಹೋರಾಡಿದರು ಎಂದು ರಾಜ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಇತ್ತ ಶಿವಸೇನೆ ಕೂಡ ರಾಹುಲ್ ಗಾಂಧಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಹುಲ್ ವರ್ಚಸ್ಸು ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತಿದೆ ಎಂದು ಶಿವಸೇನೆ ಹೇಳಿದೆ.