14 ವರ್ಷಗಳ ಬಳಿಕ ನವದೆಹಲಿಗೆ ತೆರಳಲಿರುವ ರಾಜ್ ಠಾಕ್ರೆ| ರಾಷ್ಟ್ರ ರಾಜಧಾನಿಗೆ ಕಾಲಿಡಲಿರುವ MNS ಮುಖ್ಯಸ್ಥ| ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಭೇಟಿ ಮಾಡಲಿರುವ ಠಾಕ್ರೆ| ಇವಿಎಂ ಕುರಿತು ದೂರು ನೀಡಲಿದ್ದಾರೆ ಜ್ಯೂನಿಯರ್ ಠಾಕ್ರೆ| 2005ರಲ್ಲಿ ಕೊನೆಯ ಬಾರಿ ದೆಹಲಿಗೆ ಭೇಟಿ ನೀಡಿದ್ದ ರಾಜ್ ಠಾಕ್ರೆ|
ಮುಂಬೈ(ಜು.08): ಮಹಾರಾಷ್ಟ್ರ ನವನಿರ್ಮಾಣ ಸೇನಾ(MNC) ಮುಖ್ಯಸ್ಥ ರಾಜ್ ಠಾಕ್ರೆ, ಬರೋಬ್ಬರಿ 14 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿಗೆ ಕಾಲಿಡಲಿದ್ದಾರೆ.
ತಮ್ಮ ನವದೆಹಲಿ ಭೇಟಿ ವೇಳೆ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರನ್ನು ಭೇಟಿ ಮಾಡಲಿರುವ ರಾಜ್ ಠಾಕ್ರೆ, ಎಲೆಕ್ಟ್ರಾನಿಕ್ ಮತಯಂತ್ರಗಳ ದುರುಪಯೋಗದ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ಇವಿಎಂ ಯಂತ್ರಗಳ ದುರುಪಯೋಗ ನಡೆದಿರುವ ಸಾಧ್ಯತೆ ಇದ್ದು, ಈ ಕುರಿತು ಚುನಾವಣಾ ಆಯೋಗ ಚಿಂತಿಸಬೇಕಾದ ಅವಶ್ಯಕತೆ ಇದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ರಾಜ್ ಠಾಕ್ರೆ, ಇವಿಎಂ ಮೇಲಿನ ಅನುಮಾನಗಳನ್ನು ದೂರ ಮಾಡುವುದು ಚುನಾವಣಾ ಆಯೋಗದ ಕರ್ತವ್ಯ ಎಂದು ರಾಜ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
2005ರಲ್ಲಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಬಿಡುಗಡೆ ಮಾಡಿದ್ದ ‘ಬಾಳ್ ಕೇಶವ್ ಠಾಕ್ರೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ರಾಜ್ ಠಾಕ್ರೆ ದೆಹಲಿಗೆ ಆಗಮಿಸಿದ್ದರು.
