Asianet Suvarna News Asianet Suvarna News

ಮೇಲ್ಮನೆ 2 ಕ್ಷೇತ್ರಕ್ಕೆ ಜೂ.8ಕ್ಕೆ ಚುನಾವಣೆ, 12ಕ್ಕೆ ಫಲಿತಾಂಶ

ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬರುವ ಜೂ.8ರಂದು ಚುನಾವಣೆ ನಡೆಯಲಿದ್ದು, ಜೂ.12ರಂದು ಮತ ಎಣಿಕೆ ಜರುಗಲಿದೆ ಎಂದು ಚುನಾವಣಾಧಿಕಾರಿ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.

MLC elections to graduates' and teachers' seats on June 8

ಬೆಂಗಳೂರು :  ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬರುವ ಜೂ.8ರಂದು ಚುನಾವಣೆ ನಡೆಯಲಿದ್ದು, ಜೂ.12ರಂದು ಮತ ಎಣಿಕೆ ಜರುಗಲಿದೆ ಎಂದು ಚುನಾವಣಾಧಿಕಾರಿ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ. ನಗರದ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಎರಡು ಕ್ಷೇತ್ರಗಳ ಚುನಾವಣೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿವರಿಸಿದರು.

ಬೆಂಗಳೂರು ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ, ರಾಮನಗರ ಜಿಲ್ಲೆ, ಬಿಬಿಎಂಪಿ (ಕೇಂದ್ರ, ಉತ್ತರ ಮತ್ತು ದಕ್ಷಿಣ ವಲಯ) ಒಳಪಡುತ್ತವೆ. ಈ ಕ್ಷೇತ್ರದಲ್ಲಿ ಒಟ್ಟು 65,354 ಮತದಾರರಿದ್ದಾರೆ. ಈ ಪೈಕಿ 38,451 ಪುರುಷರು, 26,891 ಮಹಿಳೆಯರು ಮತ್ತು 12 ಮಂದಿ ಇತರರಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ 36 ಮುಖ್ಯ ಮತಗಟ್ಟೆಗಳು, 46 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 82 ಮತಗಟ್ಟೆಗಳಿವೆ. ಕಣದಲ್ಲಿ 22 ಮಂದಿ ಸ್ಪರ್ಧಿಗಳಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ (ದಾವಣಗೆರೆ, ಹರಿಹರ, ಜಗಳೂರು), ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಸೇರಲಿವೆ. ಕ್ಷೇತ್ರದಲ್ಲಿ ಒಟ್ಟು 19,402 ಮತದಾರರ ಪೈಕಿ 13,461 ಪುರುಷರು, 5,940 ಮಹಿಳೆಯರು ಮತ್ತು ಇತರೆ ಒಬ್ಬರಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 31 ಮುಖ್ಯ ಮತಗಟ್ಟೆ, 6 ಹೆಚ್ಚುವರಿ ಮತಗಟ್ಟೆಸೇರಿದಂತೆ ಒಟ್ಟು 37 ಮತಗಟ್ಟೆಕೇಂದ್ರಗಳಿವೆ. ಕ್ಷೇತ್ರದ ಚುನಾವಣಾ ಕಣದಲ್ಲಿ 14 ಅಭ್ಯರ್ಥಿಗಳಿದ್ದಾರೆ ಎಂದು ತಿಳಿಸಿದರು.

ಎಡಗೈ ಮಧ್ಯದ ಬೆರಳಿಗೆ ಶಾಯಿ:  ಮತ ಚಲಾಯಿಸುವಾಗ ಎಪಿಕ್‌ ಐಡಿ ಅಥವಾ ಚುನಾವಣಾ ಆಯೋಗದಿಂದ ಸೂಚಿಸಿರುವ ಯಾವುದಾದರೂ ಗುರುತಿನ ಚೀಟಿ ಹಾಜರುಪಡಿಸಬೇಕು. ಈ ಚುನಾವಣೆಯ ವಿಶೇಷವೆಂದರೆ, ಮತದಾನದ ವೇಳೆ ಮತದಾರರ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುತ್ತಿದೆ. ಇತ್ತೀಗಷ್ಟೇ ನಡೆದ ವಿಧಾನಸಭಾ ಚುನಾವಣೆ ಮತದಾನದ ವೇಳೆ ಎಡಗೈ ತೋರು ಬೆರಳಿಗೆ ಶಾಹಿ ಹಾಕಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿ ಮತಗಟ್ಟೆಕೇಂದ್ರಕ್ಕೆ ಒಬ್ಬರು ಪ್ರೊಸೀಡಿಂಗ್‌ ಆಫಿಸರ್‌, ಇಬ್ಬರು ಸಹಾಯಕ ಪ್ರೋಸಿಡಿಂಗ್‌ ಆಫೀಸರ್‌, ಇಬ್ಬರು ಪೊಲೀಸ್‌ ಅಧಿಕಾರಿಗಳಂತೆ ಸಿಬ್ಬಂದಿ ನೇಮಿಸಲಾಗಿದೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ಪರಿಶೀಲಿಸಲು 16 ಫ್ಲೈಯಿಂಗ್‌ ಸ್ವೌ$್ಕಡ್‌ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 31 ಫ್ಲೈಯಿಂಗ್‌ ಸ್ಕಾ$್ವಡ್‌ ರಚಿಸಲಾಗಿದೆ. ಮತದಾನ ಸುಲಲಿತವಾಗಿ ನಡೆಯಲು ಅನುವಾಗುವಂತೆ ಪ್ರತಿ ಮತಗಟ್ಟೆಗೆ ಒಬ್ಬ ಮೈಕ್ರೋ ಅಬ್ಸರ್ವರ್‌ ನೇಮಿಸಲಾಗಿದೆ. ಅಂತೆಯೆ ಎಲ್ಲ ಮತಗಟ್ಟೆಅಧಿಕಾರಿಗಳಿಗೆ ಎರಡು ಬಾರಿ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನದ ದಿನ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಚಿತ್ರೀಕರಿಸಲು ಒಬ್ಬರು ವೀಡಿಯೋಗ್ರಾಫರ್‌ ನೇಮಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಜೂ.6ರಂದು ಸಂಜೆ 4 ಗಂಟೆಗೆ ಅಭ್ಯರ್ಥಿಗಳು ಬಹಿರಂಗ ಪ್ರಚಾರ ಅಂತ್ಯಗೊಳಿಸಲು ಸೂಚಿಸಲಾಗಿದೆ. ಜೂ.8ರಂದು ಎರಡೂ ಕ್ಷೇತ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಜೂ.12ರಂದು ಮತ ಎಣಿಕೆ:  ಜೂ.12ರಂದು ನಗರದ ರೇಸ್‌ ಕೋರ್ಸ್‌ ರಸ್ತೆಯ ರಾಮನಾರಾಯಣ್‌ ಚಲ್ಲಾರಾಮ್‌ ಕಾಲೇಜಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.

ತಲಾ 14 ಟೇಬಲ್‌ಗಳಲ್ಲಿ ಎರಡೂ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಹಿರಿಯ ಐಎಎಸ್‌ ಅಧಿಕಾರಿ ದರ್ಪಣ್‌ ಜೈನ್‌ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಮಂಜುನಾಥ್‌ ಪ್ರಸಾದ್‌ ಅವರನ್ನು ನೇಮಿಸಲಾಗಿದೆ ಎಂದರು.

ಅಂಕಿಗಳಲ್ಲಿ ಗುರುತು:

ಮತಪತ್ರದಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಸಬಂಧಿಸಿದಂತೆ ಕ್ರಮ ಸಂಖ್ಯೆ, ಅಭ್ಯರ್ಥಿಯ ಹೆಸರು, ಪಕ್ಷದ ಹೆಸರು ಮತ್ತು ಅಭ್ಯರ್ಥಿಯ ಭಾವಚಿತ್ರ ಇರುತ್ತದೆ. ಮತದಾರರು ಪ್ರಾಶಸ್ತ್ಯದ ಮತ ಗುರುತು ಮಾಡಲು ಅಂಕಣವಿರುತ್ತದೆ. ಮತಪತ್ರದ ಕೊನೆಯಲ್ಲಿ ನೋಟಾ ಅಂಕಣವೂ ಇರುತ್ತದೆ. ಪ್ರಾಶಸ್ತ್ಯದ ಮತ ನೀಡುವಾಗ 1,2,3 ಅಥವಾ ರೋಮನ್‌ ಅಂಕಿಗಳಲ್ಲಿ ಅಂಕಣದಲ್ಲಿ ಗುರುತು ಮಾಡಬೇಕು.

ಮತಗಟ್ಟೆಕ್ಷೇತ್ರದಲ್ಲಿ ಸರಬರಾಜು ಮಾಡುವ ವೈಲೆಟ್‌ ಸ್ಕೆಚ್‌ ಪೆನ್ನಿಂದ ಮಾತ್ರ ಗುರುತು ಮಾಡಬೇಕು. ಒಂದು ವೇಳೆ ಅಭ್ಯರ್ಥಿಯ ಹೆಸರಿನ ಮುಂದೆ ಸಹಿ, ಇನ್ಶಿಯಲ್‌ ಹಾಗೂ ಹೆಬ್ಬೆಟ್ಟಿನ ಗುರುತು ಮಾಡಿದರೆ ಅಂಥಹ ಮತಗಳನ್ನು ಅಮಾನ್ಯ ಮಾಡಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದರು.

ಅಭ್ಯರ್ಥಿಗಳ ವೆಚ್ಚಕ್ಕೆ ಮಿತಿ ಇಲ್ಲ:  ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಇಷ್ಟೇ ಮೊತ್ತ ಖರ್ಚು ಮಾಡಬೇಕು ಎಂಬ ಮಿತಿ ಇದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಆ ರೀತಿಯ ಮಿತಿ ಇಲ್ಲ. ಅವರು ಎಷ್ಟುಬೇಕಾದರೂ ಖರ್ಚು ಮಾಡಬಹುದು ಎಂದು ಅವರು ಹೇಳಿದರು.

Follow Us:
Download App:
  • android
  • ios