ಈ ನಡುವೆ ಶಾಸಕ ಷಡಕ್ಷರಿ ತಮ್ಮ ಶಿಷ್ಯನ ವಿರುದ್ದ ಎಫ್'ಐಆರ್ ದಾಖಲಾಗದಂತೆ ತಿಪಟೂರು ನಗರ ಠಾಣೆಗೆ ಬಂದು ರಾಜೀಸಂಧಾನ ಮಾಡಲು ಮುಂದಾಗಿದ್ದರು. ಆಗ ಠಾಣೆ ಎದುರು ಜನಜಮಾವಣೆಗೊಂಡು ಶಾಸಕರ ವರ್ತನೆ ಖಂಡಿಸಿದರು. ಹಾಗಾಗಿ ವಿಧಿಯಿಲ್ಲದೆ ಪೊಲೀಸರು ಎಫ್'ಐಆರ್ ದಾಖಲಿಸಿದ್ದಾರೆ.
ತುಮಕೂರು (ಫೆ.16): ತಿಪಟೂರು ಶಾಸಕ ಕೆ.ಷಡಕ್ಷರಿ ಬಲಗೈ ಬಂಟ ಹಾಗೂ ಹಾಲಿ ಜಿಲ್ಲಾಪಂಚಾಯತ್ ಸದಸ್ಯ ನಾರಾಯಣ ಬಡ ರೈತನ ಮೇಲೆ ದರ್ಪತೋರಿದ್ದಾನೆ.
ರೈತನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಿನ್ನೆ ನಡೆದಿದೆ. ಬೆಳಗರ ಹಳ್ಳಿ ನಿವಾಸಿ ಶ್ಯಾಮ್ ಹಲ್ಲೆಗೊಳಗಾದ ರೈತ. ರೈತ ಶ್ಯಾಮ್ ಗೊರೊಗೊಂಡನಹಳ್ಳಿ ಬಳಿ ಇರುವ ತನ್ನ ಜಮೀನನ್ನು ಲೇಔಟ್ ಮಾಡಲು ನಾರಾಯಣನಿಗೆ ಕೊಟ್ಟಿದ್ದರು. ಪೂರ್ತಿ ಹಣ ಕೊಡುವವರೆಗೂ ದಾಖಲೆ ಪತ್ರಕ್ಕೆ ಸಹಿಹಾಕಲ್ಲ ಎಂದು ರೈತ ಶ್ಯಾಮ್ ಹಠ ಹಿಡಿದಿದ್ದ. ಇದಕ್ಕೆ ಒಪ್ಪದ ನಾರಾಯಣ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಅಲ್ಲದೆ ತನ್ನ ಸಹಚರರೊಂದಿಗೆ ಸೇರಿ ತಿಪಟೂರಿನಿಂದ ಬೆಂಗಳೂರು ಯಲಹಂಕದವರೆಗೂ ಕಾರಿನಲ್ಲಿ ಶ್ಯಾಮ್'ಗೆ ಹಲ್ಲೆ ನಡೆಸುತ್ತಾ ಬಂದಿದ್ದಾನೆ. ಬಳಿಕ ಕುಣಿಗಲ್ ತಾಲೂಕಿನ ಯಡಿಯೂರು ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಸ್ನೇಹಿತರ ಸಹಾಯದಿಂದ ರೈತ ಶ್ಯಾಮ್ ತಿಪಟೂರಿಗೆ ವಾಪಸ್ಸಾಗಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಶಾಸಕ ಷಡಕ್ಷರಿ ತಮ್ಮ ಶಿಷ್ಯನ ವಿರುದ್ದ ಎಫ್'ಐಆರ್ ದಾಖಲಾಗದಂತೆ ತಿಪಟೂರು ನಗರ ಠಾಣೆಗೆ ಬಂದು ರಾಜೀಸಂಧಾನ ಮಾಡಲು ಮುಂದಾಗಿದ್ದರು. ಆಗ ಠಾಣೆ ಎದುರು ಜನಜಮಾವಣೆಗೊಂಡು ಶಾಸಕರ ವರ್ತನೆ ಖಂಡಿಸಿದರು. ಹಾಗಾಗಿ ವಿಧಿಯಿಲ್ಲದೆ ಪೊಲೀಸರು ಎಫ್'ಐಆರ್ ದಾಖಲಿಸಿದ್ದಾರೆ.
