ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಬಿಬಿಎಂಪಿ ಒಕ್ಕಲಿಗ ಸಮುದಾಯದ ಸದಸ್ಯರಿಂದ ಸಭೆ ನಡೆಸಿ, ಶಾಸಕರ ಹೇಳಿಕೆಯಿಂದ ಸ್ವಾಮೀಜಿಗಳಿಗೆ ಅವಮಾನ ಆಗಿದ್ದು, ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು(ಅ.30): ರಾಜರಾಜೇಶ್ವರಿ ವಿಧಾನಸಭಾ ಶಾಸಕ ಮುನಿರತ್ನ ಅವರು ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ರಾಜಕಾರಣಿಗಳ ಬದಲು ಇನ್ಮುಂದೆ ಸ್ವಾಮೀಜಿಗಳು ರಾಜ್ಯ ಆಳಲಿ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಬಿಬಿಎಂಪಿ ಒಕ್ಕಲಿಗ ಸಮುದಾಯದ ಸದಸ್ಯರಿಂದ ಸಭೆ ನಡೆಸಿ, ಶಾಸಕರ ಹೇಳಿಕೆಯಿಂದ ಸ್ವಾಮೀಜಿಗಳಿಗೆ ಅವಮಾನ ಆಗಿದ್ದು, ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
