ಸ್ವಾಮೀಜಿಗಳು ಹಿಂದಿನಿಂದಲೂ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಅಭಿವೃದ್ಧಿಗಾಗಿ ಅನೇಕ ಸಲಹೆಗಳನ್ನು ಕೊಡುತ್ತಾ ಬಂದಿದ್ದಾರೆ. ನಾನು ಸ್ವಾಮೀಜಿಗಳನ್ನು ಚುನಾವಣೆಗೆ ನಿಲ್ಲಿ ಎಂದಿಲ್ಲ ಮುಖ್ಯಮಂತ್ರಿ ಆಗಿ ಎಂದು ಎಲ್ಲೂ ಹೇಳಿಲ್ಲ.
ಬೆಂಗಳೂರು(ಅ.31): ನಾನು ಆದಿಚುಂಚನಗಿರಿ ನಿರ್ಮಲನಂದ ಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ. ನಾನು ಮಾತನಾಡಿರುವ ಪದಗಳು ನಿಮ್ಮ ಮುಂದೆ ಇವೆ. ನನ್ನ ಮಾತಿನಿಂದ ಸ್ವಾಮೀಜಿಗಳಿಗೆ ಬೇಸರವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ತಿಳಿಸಿದರು.
ಸ್ವಾಮೀಜಿಯವರು ಆಳ್ವಿಕೆ ನಡೆಸಲಿ ಎಂಬ ವಿವಾದಿದ ಹೇಳಿಕೆ ಬಗ್ಗೆ ಸ್ಪಷ್ಟಿಕರಣ ನೀಡಿದ ಶಾಸಕ ಮುನಿರತ್ನ, ಸ್ವಾಮೀಜಿಗಳು ಹಿಂದಿನಿಂದಲೂ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಅಭಿವೃದ್ಧಿಗಾಗಿ ಅನೇಕ ಸಲಹೆಗಳನ್ನು ಕೊಡುತ್ತಾ ಬಂದಿದ್ದಾರೆ. ನಾನು ಸ್ವಾಮೀಜಿಗಳನ್ನು ಚುನಾವಣೆಗೆ ನಿಲ್ಲಿ ಎಂದಿಲ್ಲ ಮುಖ್ಯಮಂತ್ರಿ ಆಗಿ ಎಂದು ಎಲ್ಲೂ ಹೇಳಿಲ್ಲ. ನಾನು ಈ ಬಗ್ಗೆ ಸ್ವಾಮೀಜಿಗಳಿಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ.ಯಾವುದೇ ಸ್ವಾಮೀಜಿಗಳ ಬಗ್ಗೆ ಮಾತನಾಡುವ ವ್ಯಕ್ತಿ ನಾನಲ್ಲ ಎಂದರು.
ನಾನು ಶಾಸಕನಾಗಲು ಎಲ್ಲಾ ಸಮುದಾಯದಿಂದ ಮತ ಪಡೆದಿದ್ದೇನೆ. ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ 8 ವಾರ್ಡ್ನ ಪೈಕಿ 4 ವಾರ್ಡ್'ಅನ್ನು ಒಕ್ಕಲಿಗರಿಗೆ ನೀಡಿದ್ದೇನೆ. ನಾನು ಒಕ್ಕಲಿಗರನ್ನು ತುಳಿದಿಲ್ಲ. ನನಗೆ ಬಿಜೆಪಿಯಲ್ಲಿ ಸುರೇಶ್ ಕುಮಾರ್, ಸೋಮಣ್ಣ ಸ್ನೇಹಿತರು. ಅವರು ಹುಟ್ಟಿದ ಊರು, ವಿದ್ಯಾಭ್ಯಾಸ ಎಲ್ಲವೂ ನನ್ನ ಕ್ಷೇತ್ರವೇ. ಎಲ್ಲಾ 9 ಪಾಲಿಕೆ ಸದಸ್ಯರನ್ನು ಶೀಘ್ರವೇ ಸಭೆ ಕರೆಯಲಿದ್ದು, ಈ ಪ್ರಕರಣ ಬಿಟ್ಟುಬಿಡಿ ಪ್ರತಿಭಟನಾ ನಿರತರಿಗೆ ಮನವಿ ಮಾಡಿದರು.
Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
