ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಮಹಿಳಾ ಡ್ಯಾನ್ಸರ್ ವೇದಿಕೆಯಿಂದ ಕೆಳಗೆ ಇಳಿದು ಬಂದು ಶಾಸಕನ ಮುಂದೆ ಡ್ಯಾನ್ಸ್ ಮಾಡಲು ಶುರು ಮಾಡಿದ್ದಳು
ಬಲರಾಂಪುರ್(ಅ.20):ಉತ್ತರಪ್ರದೇಶದ ಬಲರಾಂಪುರ್ ಶಾಸಕ ಜಗರಾಮ್ ಪಾಸ್ವಾನ್ ಮಹಿಳಾ ಡ್ಯಾನ್ಸರ್ ಜೊತೆ ಅಸಭ್ಯವಾಗಿ ವರ್ತಿಸಿ ವಿವಾದಕ್ಕೆ ಸಿಲುಕಿದ್ದಾರೆ. ಬಲರಾಂಪುರ್ ಜಿಲ್ಲೆಯ ಸಮಾಜವಾದಿ ಪಕ್ಷದ ಶಾಸಕ ಜಗರಾಮ್ ಪಾಸ್ವಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಮಹಿಳಾ ಡ್ಯಾನ್ಸರ್ ವೇದಿಕೆಯಿಂದ ಕೆಳಗೆ ಇಳಿದು ಬಂದು ಶಾಸಕನ ಮುಂದೆ ಡ್ಯಾನ್ಸ್ ಮಾಡಲು ಶುರು ಮಾಡಿದ್ದಳು. ಈ ಸಮಯದಲ್ಲಿ ಶಾಸಕ ಮಹಿಳಾ ಡ್ಯಾನ್ಸರ್‍ನ ಬ್ಲೌಸ್ ಒಳಗಡೆ ಹಣವಿಟ್ಟಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದ್ದು, ಶಾಸಕ ವಿವಾದಕ್ಕೆ ಸಿಲುಕಿಕೊಂಡಿದ್ದಾನೆ.
