. ನಾನು ಅಧಿಕಾರಿಯಾಗಿ ಈ ಮೊದಲು ಕೆಲಸ ಮಾಡಿದ್ದೇನೆ

ಬೆಳಗಾವಿ(ಜ.10): 'ಜನರು ನನ್ನನ್ನ ಗೆಲ್ಲಿಸಿದ್ದಾರೆ ಅವರಿಗೆ ನ್ಯಾಯ ಕೊಡಿಸುವುದೇ ನನ್ನ ಕೆಲಸ' ಎಂದು ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರ ಬಗ್ಗೆ ಸುವರ್ಣ ನ್ಯೂಸ್'ನೊಂದಿಗೆ ಸ್ಪಷ್ಟಪಡಿಸಿದ ಅವರು, ನಾನು ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿಲ್ಲ. ನಾವೆಲ್ಲರೂ ಜನರಿಗೆ ಸೇವೆ ಮಾಡುತ್ತಿದ್ದೇವೆ. ನಾನು ಅಧಿಕಾರಿಯಾಗಿ ಈ ಮೊದಲು ಕೆಲಸ ಮಾಡಿದ್ದೇನೆ. ಜನರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಯಾರೆ ಆಗಲಿ ಮೊದಲು ತಾಳ್ಮೆಯಿಂದ ಹೇಳುತ್ತೇನೆ.ಅವರು ಕೇಳಲಿಲ್ಲ ಅಂದರೆ ಕಾನೂನಿನ ಚೌಕಟ್ಟಿನಲ್ಲಿ ಹೇಳುತ್ತೇನೆ. ಅದಕ್ಕೂ ಬಗ್ಗಲಿಲ್ಲ ಅಂದರೆ ನಾನು ಆ ಪದ ಬಳಸಲೆ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.