Asianet Suvarna News Asianet Suvarna News

ಸಿಎಂ ಎದುರೇ ಶಕ್ತಿ ಪ್ರದರ್ಶನಕ್ಕೆ ಮುಂದಾದ ಶಾಸಕ ಹ್ಯಾರಿಸ್

ತಮ್ಮ ಪುತ್ರ ಮಹಮದ್ ನಲಪಾಡ್ ಗೂಂಡಾಗಿರಿ ಪ್ರಕರಣದಿಂದ ಹೊರಬರ ಲೆತ್ನಿಸುತ್ತಿರುವ ಶಾಸಕ ಎನ್.ಎ. ಹ್ಯಾರಿಸ್, ಗುರುವಾರ ಚರ್ಚ್‌ಸ್ಟ್ರೀಟ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶನದ ಮೂಲಕ ತಮ್ಮ ಜನಪ್ರಿಯತೆಗೆ ಯಾವುದೇ ಕುಂದುಂಟಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಯತ್ನಿಸಿದ ಪ್ರಸಂಗ ನಡೆಯಿತು.

MLA Harris Show up In Program

ಬೆಂಗಳೂರು: ತಮ್ಮ ಪುತ್ರ ಮಹಮದ್ ನಲಪಾಡ್ ಗೂಂಡಾಗಿರಿ ಪ್ರಕರಣದಿಂದ ಹೊರಬರ ಲೆತ್ನಿಸುತ್ತಿರುವ ಶಾಸಕ ಎನ್.ಎ. ಹ್ಯಾರಿಸ್, ಗುರುವಾರ ಚರ್ಚ್‌ಸ್ಟ್ರೀಟ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶನದ ಮೂಲಕ ತಮ್ಮ ಜನಪ್ರಿಯತೆಗೆ ಯಾವುದೇ ಕುಂದುಂಟಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಯತ್ನಿಸಿದ ಪ್ರಸಂಗ ನಡೆಯಿತು.

ಅಲ್ಲದೆ, ಕಾರ್ಯಕ್ರಮದ ವೇಳೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಾಸಕರ ಬೆಂಬಲಿಗರು ಪಕ್ಷದ ಬಾವುಟ ಹಿಡಿದು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸರ್ಕಾರಿ ಕಾರ್ಯಕ್ರಮ ಒಂದು ಹಂತಕ್ಕೆ ಕಾಂಗ್ರೆಸ್ ಕಾರ್ಯಕ್ರಮದಂತೆ ಭಾಸವಾಯಿತು.

ಕೊನೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ವೇದಿಕೆ ಯಿಂದಲೇ ಪಕ್ಷದ ಬಾವುಟ ಪ್ರದರ್ಶಿಸದಂತೆ ಕಾರ್ಯ ಕರ್ತರಿಗೆ ಮನವಿ ಮಾಡಿದ ಘಟನೆಯೂ ನಡೆಯಿತು. ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚರ್ಚ್‌ಸ್ಟ್ರೀಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ ವೇಳೆ ಇಡೀ ಚರ್ಚ್  ರ್ಸ್ಟ್ರೀಟ್‌ನುದ್ದಕ್ಕೂ ಕ್ಷೇತ್ರದ ಕಾಂಗ್ರೆಸ್ ಕಾರ್ಯ ಕರ್ತರು ಹಾಗೂ ಶಾಸಕರ ಬೆಂಬಲಿಗರು ಕಾಂಗ್ರೆಸ್ ಬಾವುಟ ಹಿಡಿದು ಮುಖ್ಯಮಂತ್ರಿ ಹಾಗೂ ಶಾಸಕ ಹ್ಯಾರಿಸ್ ಪರ ಘೋಷಣೆ ಕೂಗುತ್ತಿದ್ದರು.

ಬಿಎಂಟಿಸಿ ಬಸ್‌ನಲ್ಲಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಮೂಲಕ ಚರ್ಚ್‌ಸ್ಟ್ರೀಟ್ ಪ್ರವೇಶಿಸಿದಾಗ ಪಕ್ಷದ ಕಾರ್ಯಕರ್ತರು ರಸ್ತೆಯುದ್ದಕ್ಕೂ ಜಮಾಯಿಸಿದ್ದರು, ಹೀಗಾಗಿ ಅರ್ಧದಲ್ಲೇ ಬಸ್ ಇಳಿದ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆದುಕೊಂಡೇ ರಸ್ತೆಯ ವೀಕ್ಷಣೆ ನಡೆಸಿದರು. ನಂತರ ಪಾವಗಡಕ್ಕೆ ತೆರಳಬೇಕಿದ್ದ ಮುಖ್ಯ ಮಂತ್ರಿಅಧಿಕೃತವಾಗಿ ಟೇಪ್ ಕತ್ತರಿಸಿ ಹೊರಟುಬಿಟ್ಟರು

 

Follow Us:
Download App:
  • android
  • ios