ಹ್ಯಾರೀಸ್ ಪುತ್ರನನ್ನು ರಕ್ಷಿಸಲು ನಿಂತಿದೆಯಾ ಖಾಕಿ ಪಡೆ?

MLA Haris Son Attack Case
Highlights

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣದಲ್ಲಿ   ಪ್ರಕರಣ ಮುಚ್ಚಿ ಹಾಕಲು ಕಬ್ಬನ್​ ಪಾಕ್​ ಪೊಲೀಸರ ಕಸರತ್ತು ನಡೆಸುತ್ತಿದ್ದಾರೆಯೇ ಎನ್ನುವ ಉದ್ಭವವಾಗಿದೆ. ಹ್ಯಾರಿಸ್​ ಮಗನ ವಿರುದ್ಧ ಇನ್ನೂ 307 ಸೆಕ್ಷನ್ ದಾಖಲಿಸದ ಕಬ್ಬನ್ ಪಾರ್ಕ್ ಪೊಲೀಸರು  ಎಂಎಲ್​ಎ ಸಾಹೇಬರನ್ನು ಮೆಚ್ಚಿಸಲು  ಟೊಂಕ ಕಟ್ಟಿ ನಿಂತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. 
ತಲೆ ಮೇಲೆ ಹೊಡೆದರೆ ಸಹಜವಾಗಿಯೇ ಕೊಲೆ ಯತ್ನ ಕೇಸು ದಾಖಲಿಸಬೇಕು ಆದರೆ   ಹ್ಯಾರೀಸ್ ಮಗನಿಗಾಗಿ ಪೊಲೀಸರು  ಕೇಸ್​ ಅನ್ನೇ ಉಲ್ಟಾ ಪಲ್ಟಾ ಮಾಡುತ್ತಿದ್ದಾರೆ.  ಸಾಧಾರಣ ಸೆಕ್ಷನ್’ನಲ್ಲಷ್ಟೇ  ದೂರು ದಾಖಲಿಸಿದ್ದಾರೆ. 

ಬೆಂಗಳೂರು (ಫೆ.17): ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣದಲ್ಲಿ   ಪ್ರಕರಣ ಮುಚ್ಚಿ ಹಾಕಲು ಕಬ್ಬನ್​ ಪಾಕ್​ ಪೊಲೀಸರ ಕಸರತ್ತು ನಡೆಸುತ್ತಿದ್ದಾರೆಯೇ ಎನ್ನುವ ಉದ್ಭವವಾಗಿದೆ. ಹ್ಯಾರಿಸ್​ ಮಗನ ವಿರುದ್ಧ ಇನ್ನೂ 307 ಸೆಕ್ಷನ್ ದಾಖಲಿಸದ ಕಬ್ಬನ್ ಪಾರ್ಕ್ ಪೊಲೀಸರು  ಎಂಎಲ್​ಎ ಸಾಹೇಬರನ್ನು ಮೆಚ್ಚಿಸಲು  ಟೊಂಕ ಕಟ್ಟಿ ನಿಂತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. 
ತಲೆ ಮೇಲೆ ಹೊಡೆದರೆ ಸಹಜವಾಗಿಯೇ ಕೊಲೆ ಯತ್ನ ಕೇಸು ದಾಖಲಿಸಬೇಕು ಆದರೆ   ಹ್ಯಾರೀಸ್ ಮಗನಿಗಾಗಿ ಪೊಲೀಸರು  ಕೇಸ್​ ಅನ್ನೇ ಉಲ್ಟಾ ಪಲ್ಟಾ ಮಾಡುತ್ತಿದ್ದಾರೆ.  ಸಾಧಾರಣ ಸೆಕ್ಷನ್’ನಲ್ಲಷ್ಟೇ  ದೂರು ದಾಖಲಿಸಿದ್ದಾರೆ. 

ಏನಂತಾರೆ ಗೃಹ ಸಚಿವರು?

ಪೊಲೀಸರ ಈ ಕ್ರಮಕ್ಕೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.  ಕಾಂಗ್ರೆಸ್ ಶಾಸಕ ಆಗಿರಲಿ, ಬಿಜೆಪಿ ಶಾಸಕ ಆಗಿರಲಿ ಕಾನೂನು ಎಲ್ಲರಿಗೂ ಒಂದೇ. ನಾನೇ ಕಮಿಷನರ್’ಗೆ ಹೇಳಿದೀನಿ ಹ್ಯಾರೀಸ್ ಮಗನ ವಿರುದ್ಧ ಕ್ರಮ ಕೖಗೊಳ್ಳಿ. ಅರೆಸ್ಟ್ ಮಾಡಿ ಎಂದು ಸೂಚಿಸಿದ್ದೇನೆ ಎಂದು ಸುವರ್ಣ ನ್ಯೂಸ್’ಗೆ ಹೇಳಿದ್ದಾರೆ. 

ಸಿಎಂ ಪ್ರತಿಕ್ರಿಯೆ

ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ.  ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ.  ತಪ್ಪು ಮಾಡಿದವರು ಯಾರೇ ಆಗಲಿ ಕಾನೂನು ಪ್ರಕಾರ ಶಿಕ್ಷೆಯಾಗಬೇಕು.  ತಕ್ಷಣ ಕ್ರಮ ಜರುಗಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪಕ್ಷದಿಂದ ಉಚ್ಚಾಟನೆ 
ಹ್ಯಾರೀಸ್​ ಮಗ ನಲಪಾಡ್​’ನನ್ನು  ಕಾಂಗ್ರೆಸ್’​ನಿಂದ 6 ವರ್ಷ ಉಚ್ಚಾಟನೆ ಮಾಡಲಾಗಿದೆ.  ಪಕ್ಷದ ಎಲ್ಲ ಜವಾಬ್ದಾರಿ, ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಳಿಸಿರುವ ಆದೇಶವನ್ನು  ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್​ ಹೊರಡಿಸಿದ್ದಾರೆ. 

loader