ಸರ್ಕಾರದ ಗಮನವನ್ನು ಸೆಳೆಯಲು ಬಿಜೆಪಿ ಶಾಸಕ ವಿನಯ್ ಬಿಹಾರಿ ಶಾರ್ಟ್ಸ್ ಹಾಗೂ ಬನಿಯಾನ್ ಧರಿಸಿಯೇ ವಿಧಾನಸಭೆಗೆ ಬಂದಿದ್ದಾರೆ.

ಪಾಟ್ನಾ (ನ,.28): ಯಾವುದಾದರೂ ವಿಷಯದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜನಪ್ರತಿನಿಧಿಗಳು ಆಗ್ಗಾಗೆ ವಿಷಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಹಾರದ ಶಾಸಕರೊಬ್ಬರು ವಿಷಿಷ್ಠ ರೀತಿಯಲ್ಲಿ ಪ್ರತಿಭಟಿಸಿ ಈಗ ಸುದ್ದಿಯಾಗಿದ್ದಾರೆ.

ತನ್ನ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣದ ಕೆಲಸ ವಿಳಂಬವಾಗುತ್ತಿದೆ, ಆ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು ಬಿಜೆಪಿ ಶಾಸಕ ವಿನಯ್ ಬಿಹಾರಿ ಶಾರ್ಟ್ಸ್ ಹಾಗೂ ಬನಿಯಾನ್ ಧರಿಸಿಯೇ ವಿಧಾನಸಭೆಗೆ ಬಂದಿದ್ದಾರೆ.

ಆದರೆ ಆ ಧಿರಿಸಿನಲ್ಲಿ ಅವರನ್ನು ಒಳಬಿಡಲಾಗಿಲ್ಲ ಎಂದು ತಿಳಿದುಬಂದಿದೆ.