ಜೆಡಿಎಸ್’ಗೆ ಮರಳುವುದು ಕನಸಿನ ಮಾತು, ಬಿಜೆಪಿ ಒಡೆದ ಮನೆಯಾಗಿದೆ ಹಾಗಾಗಿ ಕಾಂಗ್ರೆಸ್‌ ಸೇರಲು ಇಚ್ಚಿಸಿದ್ದೇನೆ ಎಂದು ಪಾಟೀಲ್ ಹೇಳಿದ್ದಾರೆ.
ಕಲಬುರಗಿ (ಜ.15): ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ ಆರ್ ಪಾಟೀಲ್ ಕಾಂಗ್ರೆಸ್’ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಪಾಟೀಲ್, ಜಾತ್ಯತೀತತೆ ಉಳಿಬೇಕಾದರೆ ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಯ ಅಗತ್ಯವಿದೆ, ಹಾಗಾಗಿ ಕಾಂಗ್ರೆಸ್ ಸೇರಲು ಇಚ್ಛೆ ಹೊಂದಿದ್ದೇನೆ, ಇದಕ್ಕೆ ಆ ಪಕ್ಷದ ಎಲ್ಲಾ ಮುಖಂಡರ ಬೆಂಬಲದ ವಿಶ್ವಾಸವಿದೆ ಎಂದಿದ್ದಾರೆ.
ಜೆಡಿಎಸ್’ಗೆ ಮರಳುವುದು ಕನಸಿನ ಮಾತು, ಬಿಜೆಪಿ ಒಡೆದ ಮನೆಯಾಗಿದೆ ಹಾಗಾಗಿ ಕಾಂಗ್ರೆಸ್ ಸೇರಲು ಇಚ್ಚಿಸಿದ್ದೇನೆ ಎಂದು ಪಾಟೀಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ನೋಟು ಅಪಮೌಲ್ಯಗೊಳಿಸಿದ ರೀತಿಯಲ್ಲೇ ಗಾಂಧಿಜೀಯನ್ನು ಅಪಮೌಲ್ಯಗೊಳಿಸಲು ಬಿಜೆಪಿ ಹೊರಟಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಬ್ರಿಗೇಡ್ ಮೂಲಕ ಒಳಜಗಳ ಸೃಷ್ಟಿಸಿ ಮೂರನೇಯವರಿಗೆ ಲಾಭ ಮಾಡಿಕೊಡುವುದು ಆರೆಸ್ಸೆಸ್’ನ ಅಜೆಂಡಾ ಆಗಿದೆ ಎಂದು ಅವರು ಹೇಳಿದ್ದಾರೆ.
