ಜೆಡಿಎಸ್​ ಕಾರ್ಯಕರ್ತನೊಬ್ಬನ ಮೇಲೆ ನಡೆದ ಹಲ್ಲೆ ವಿಚಾರಕ್ಕೆ ಸಂಬಂಧಿಸಿ ಕಳೆದ 15 ರಂದು ತಮ್ಮ ಬೆಂಬಲಿಗರೊಂದಿಗೆ ಕುದೂರು ಠಾಣೆಗೆ ಬಂದಿದ್ದರು. ಕೂದೂರಿನ ಅಯ್ಯಂಡಹಳ್ಳಿಯಲ್ಲಿ, ದೇವಸ್ಥಾನದಲ್ಲಿ ಹೂವಿನ ಹಾರ ಹಾಕುವ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಂಗಸ್ವಾಮಿ ಮತ್ತು ಬಾಲಕೃಷ್ಣ ಬೆಂಬಲಿಗ ರಮೇಶ್​ ನಡುವೆ ಮಾರಾಮಾರಿ ನಡೆದಿತ್ತು. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದವೂ ದೂರು ದಾಖಲಾಗಿತ್ತು. ಕಾಂಗ್ರೆಸ್​ ಕಾರ್ಯಕರ್ತನ ಬಂಧನ ಯಾಕೆ ನಡೆದಿಲ್ಲ ಅಂಥಾ, ಪ್ರಶ್ನಿಸಿಲು ಬಂದ ಶಾಸಕ ಬಾಲಕೃಷ್ಣ, ತನ್ನ ಸಬ್ಯತೆಯನ್ನ ಪ್ರದರ್ಶಿಸಿದ್ದಾನೆ..!

ಬೆಂಗಳೂರು(ಜ.19): ಖಾಕಿಗಳ ಮೇಲೆ ಖಾದಿಗಳ ದರ್ಪ ಇನ್ನೂ ನಿಂತಿಲ್ಲ. ಮೊನ್ನೆ ಶಾಸಕ ಕೃಷ್ಣಪ್ಪ ಸಾರ್ವಜನಿಕವಾಗಿಯೇ, ಪೊಲೀಸ್ ಅಧಿಕಾರಿಗಳನ್ನು ಮನಸೋ ಇಚ್ಚೆ ನಿಂದಿಸಿದ್ದರು. ಆ ಘಟನೆಯ ಬೆನ್ನಲ್ಲೇ, ಇದೀಗ, ಮಾಗಡಿ ಶಾಸಕ ಬಾಲಕೃಷ್ಣ, ತಮ್ಮ ದರ್ಪ ಪ್ರದರ್ಶಿಸಿದ್ದಾರೆ.

ಜೆಡಿಎಸ್​ ಕಾರ್ಯಕರ್ತನೊಬ್ಬನ ಮೇಲೆ ನಡೆದ ಹಲ್ಲೆ ವಿಚಾರಕ್ಕೆ ಸಂಬಂಧಿಸಿ ಕಳೆದ 15 ರಂದು ತಮ್ಮ ಬೆಂಬಲಿಗರೊಂದಿಗೆ ಕುದೂರು ಠಾಣೆಗೆ ಬಂದಿದ್ದರು. ಕೂದೂರಿನ ಅಯ್ಯಂಡಹಳ್ಳಿಯಲ್ಲಿ, ದೇವಸ್ಥಾನದಲ್ಲಿ ಹೂವಿನ ಹಾರ ಹಾಕುವ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಂಗಸ್ವಾಮಿ ಮತ್ತು ಬಾಲಕೃಷ್ಣ ಬೆಂಬಲಿಗ ರಮೇಶ್​ ನಡುವೆ ಮಾರಾಮಾರಿ ನಡೆದಿತ್ತು. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದವೂ ದೂರು ದಾಖಲಾಗಿತ್ತು. ಕಾಂಗ್ರೆಸ್​ ಕಾರ್ಯಕರ್ತನ ಬಂಧನ ಯಾಕೆ ನಡೆದಿಲ್ಲ ಅಂಥಾ, ಪ್ರಶ್ನಿಸಿಲು ಬಂದ ಶಾಸಕ ಬಾಲಕೃಷ್ಣ, ತನ್ನ ಸಬ್ಯತೆಯನ್ನ ಪ್ರದರ್ಶಿಸಿದ್ದಾನೆ..!

ಠಾಣೆಯಲ್ಲಿದ್ದ ಸಬ್​ಇನ್ಸ್​ಪೆಕ್ಟರ್ ಹರೀಶ್ ಮತ್ತು ಇನ್ಸಪೇಕ್ಟರ್​​ ನಂದೀಶ್​​ ಮೇಲೆ ವಾಮಾಗೋಚರ ನಿಂದಿಸಿದ್ದಾರೆ. ಒಬ್ಬ ಶಾಸಕನ ಬಾಯಿಯಲ್ಲಿ ಬರುವ ಮಾತುಗಳಾ..? ಅವು ಅಂಥಾ ಕೂಡಾ, ಅನ್ನಿಸುತ್ತಿದೆ.