ಜೋಕಟ್ಟೆ-ಬೈಕಂಪಾಡಿ ರಸ್ತೆ ಕಾಮಗಾರಿ ವಿಚಾರದಲ್ಲಿ, ಸಾರ್ವಜನಿಕರ ಜೊತೆ ಕಚೇರಿಗೆ ನುಗ್ಗಿದ ಶಾಸಕ ಮೊಯ್ದೀನ್ ಬಾವಾ ಅಧಿಕಾರಿ ಕೈಗಾರಿಕಾಭಿವೃದ್ಧಿ ಅಧಿಕಾರಿ ಪ್ರಕಾಶ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.

ಮಂಗಳೂರು (ಫೆ.02): ಕೆಐಎಡಿಬಿ ಅಧಿಕಾರಿ ಜೊತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ.ಎ. ಮೊಯಿದ್ದೀನ್​ ಬಾವಾ ಆನುಚಿತವಾಗಿ ವರ್ತಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಜೋಕಟ್ಟೆ-ಬೈಕಂಪಾಡಿ ರಸ್ತೆ ಕಾಮಗಾರಿ ವಿಚಾರದಲ್ಲಿ, ಸಾರ್ವಜನಿಕರ ಜೊತೆ ಕಚೇರಿಗೆ ನುಗ್ಗಿದ ಶಾಸಕ ಮೊಯ್ದೀನ್ ಬಾವಾ ಅಧಿಕಾರಿ ಕೈಗಾರಿಕಾಭಿವೃದ್ಧಿ ಅಧಿಕಾರಿ ಪ್ರಕಾಶ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.

ಅಧಿಕಾರಿ ಜೊತೆ ಏಕವಚನದಲ್ಲಿ ಮಾತನಾಡಿದ ಶಾಸಕ ಮೊಯ್ದೀನ್​ ಬಾವಾ, ಅಧಿಕಾರಿ ಪ್ರಕಾಶ್’ರನ್ನು ಎದ್ದು ನಿಂತು ಕ್ಷಮಾಪಣೆ ಕೇಳುವಂತೆ ಒತ್ತಾಯಿಸಿದ್ದಾರೆ.

ಈ ಘಟನೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮುನ್ನ ಸಾರ್ವಜನಿಕರ ಜೊತೆ ಅಧಿಕಾರಿ ಪ್ರಕಾಶ್ ಉಡಾಫೆಯಿಂದ ವರ್ತಿಸಿದ್ದರು.

ಇದನ್ನು ಪ್ರಶ್ನಿಸಲು ಶಾಸಕರು ಸ್ಥಳೀಯರ ಜೊತೆ ಪ್ರಕಾಶ್ ಅವರ ಕಚೇರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.