ರಾಹುಲ್ ಗಾಂಧಿ ಮಹಾಘಟಬಂಧನ್ ಕನಸು ನನಸಾಗುತ್ತಾ?| ಒಬ್ಬೊಬ್ಬರಾಗಿ ರಾಹುಲ್ ಹೊಗಳುತ್ತಿರುವ ವಿಪಕ್ಷ ನಾಯಕರು| ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳಿದ ಎಂ.ಕೆ. ಸ್ಟಾಲಿನ್| ‘ಮೋದಿ ಸೋಲಿಸಲು ರಾಹುಲ್ ಗಾಂಧಿ ಅವರಿಂದ ಮಾತ್ರ ಸಾಧ್ಯ’| 2019ರಲ್ಲಿ ರಾಹುಲ್ ಗಾಂಧಿ ಕೈ ಬಲಪಡಿಸಲು ಸ್ಟಾಲಿನ್ ಭರವಸೆ

ಚೆನ್ನೈ(ಡಿ.18): 2019ರ ಲೋಕಸಭೆ ಚುನಾವಣೆಯಲ್ಲಿ ಮಹಾಘಟಬಂಧನ್ ಜೊತೆ ಅಖಾಡಕ್ಕಿಳಿಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯೋಜನೆ ಕೈಗೂಡುವ ಲಕ್ಷಣ ಕಾಣುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ವಿಪಕ್ಷ ನಾಯಕರು ರಾಹುಲ್ ಗಾಂಧಿ ಗುಣಗಾನ ಶುರು ಮಾಡಿದ್ದು, ಒಬ್ಬೊಬ್ಬರಾಗಿ ರಾಹುಲ್ ಅವರ ಪ್ರಶಂಸೆಗೆ ಮುಂದಾಗಿದ್ದಾರೆ.

ಅದರಂತೆ ರಾಹುಲ್ ಗಾಂಧಿ ಅವರನ್ನು ಹೊಗಳುವ ಸರದಿ ಇದೀಗ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರದ್ದು. ಹೌದು, 2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ತಾಕತ್ತು ರಾಹುಲ್ ಗಾಂಧಿ ಅವರಿಗೆ ಮಾತ್ರ ಇದೆ ಎಂದು ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.

2019ರಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ರಾಹುಲ್ ಗಾಂಧಿ ಅವರ ಕೈ ಬಲಪಡಿಸುವುದಾಗಿ ಭರವಸೆ ನೀಡಿರುವ ಸ್ಟಾಲಿನ್, ಮೋದಿ ಅವರನ್ನು ಸೋಲಿಸುವ ಛಾತಿ ರಾಹುಲ್ ಅವರಲ್ಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.