ಅಮೆರಿಕದಲ್ಲಿ ಆಕಾಶದಲ್ಲಿ ಹಾರುತ್ತಿದ್ದ ಗಿಡುಗವೊಂದು ದಿಢೀರ್ ಎಂದು ನೆಲಕ್ಕೆ ಬಿದ್ದಿದೆ. ವೈದ್ಯರು ಪರೀಕ್ಷಿಸಿದರು. ಬಳಿಕ ʼಇದಕ್ಕೆ ಹಾರಲು ಕೊಬ್ಬುʼ ಎಂದು ಕರೆದರು. ಸದ್ಯ ಗಿಡುಗದ ಕಥೆ ಭಾರೀ ಚರ್ಚೆ ಆಗ್ತಿದೆ.
ಗಿಡುಗಗಳು ಬೇಟೆಗೆ ಹೆಸರುವಾಸಿ.. ಆಕಾಶದಲ್ಲಿ ಸ್ವಚ್ಛವಾಗಿ ಹಾರುತ್ತ ತಮ್ಮ ಹದ್ದಿನ ಕಣ್ಣುಗಳ ಮೂಲಕ ಕ್ಷಣಾರ್ಧದಲ್ಲಿ ನೆಲಕ್ಕೆ ಅಪ್ಪಳಿ ಬೇಟೆ ಆಡುತ್ತವೆ. ಮಾಂಸ ಪ್ರಿಯವಾಗಿರುವ ಗಿಡುಗಳಿಗೆ ಈ ಕೋಳಿ ಮಾಂಸ ಅಂದ್ರೆ ತುಂಬಾ ಪ್ರಿಯ. ಸಣ್ಣ ಪುಟ್ಟ ಹಕ್ಕಿಗಳ ಜೊತೆಗೆ ಕೋಳಿ, ಕೋಳಿ ಮರಿಗಳು ಒಂದು ಮನೆಯಲ್ಲಿ ಅಥವಾ ಒಂದು ನಿರ್ಧಿಷ್ಟ ಸ್ಥಳದಲ್ಲಿ ಇದೆ ಅಂದರೆ ಅವುಗಳನ್ನ ಹುಡುಕಿ ಬೇಟೆ ಆಡುತ್ತವೆ. ಆದರೆ ಇಲ್ಲೊಂದು ಗಿಡುಗ ಬಾಡಿ ಶೇಮಿಂಗ್ಗೆ ಒಳಗಾಗಿದೆ. ಕಾರಣ ಏನು ಗೊತ್ತಾ? ಸೋಮಾರಿತನ!
ಅಮೆರಿಕದ ನ್ಯೂಜೆರ್ಸಿ. ಅಲ್ಲೊಂದು ಗಿಡುಗ ಇತ್ತು. ನಿತ್ಯವೂ ಆಕಾಶದಲ್ಲಿ ಗಾಳಿಯಲ್ಲಿ ಹಾರಾಡುತ್ತಿದ್ದ ಗಿಡುಗ ಇದ್ದಕ್ಕಿದ್ದಂತೆ ನೆಲಕ್ಕೆ ಉದುರಿ ಬಿತ್ತು. ಇದು ಗಮನಕ್ಕೆ ಬಂದ ತಕ್ಷಣ ತಜ್ಞ ವೈದ್ಯರಿದ್ದಲ್ಲಿ ಗಿಡುಗವನ್ನು ತೆಗೆದುಕೊಂಡು ಹೋಗಲಾಯಿತು. ವೈದ್ಯರು ಆರಂಭದಲ್ಲಿ ಮೇಲಿಂದ ಬಿದ್ದಿರೋದಕ್ಕೆ ಗಾಯ ಆಗಿದೆಯಾ? ಮೂಳೆಗಳು ಮುರಿದಿದೆಯಾ? ರೆಕ್ಕೆಗಳು ಹಾಳಾಗಿದೆಯಾ? ಅಥವಾ ದೇಹಕ್ಕೆ ಏನಾದರೂ ಹೊಕ್ಕಿದೆಯಾ ಎಂದಲ್ಲ ಪರೀಕ್ಷೆ ಮಾಡಿದರು. ಆದರೆ ಗಿಡುಗದ ಮೇಲೆ ಯಾವುದೇ ದೈಹಿಕ ಹಾನಿ ಕಂಡು ಬಂದಿಲ್ಲ. ಮತ್ತೆ ಗಿಡುಗಕ್ಕೆ ಏನಾಗಿದೆ ಎಂದು ವೈದ್ಯರು ಪರೀಕ್ಷೆಗೆ ಇಳಿದಾಗ ಆಘಾತಕಾರಿ ವಿಚಾರ ಗೊತ್ತಾಗಿದೆ.
ಅದರ ತೂಕ ಸಾಮಾನ್ಯ ತೂಕಕ್ಕಿಂತ ಹೆಚ್ಚಾಗಿತ್ತು. ದೇಹದಲ್ಲಿ ವಿಪರೀತ ಕೊಬ್ಬಿನಾಂಶ ಹೆಚ್ಚಾಗಿತ್ತು. ಪ್ಯಾಟು ಹೆಚ್ಚಾದ ಕಾರಣ ದೇಹದಲ್ಲಿ ಮೂಳೆಗಳ ರಚನೆ ಸರಿ ಆಗಲಿಲ್ಲ. ಇದರಿಂದ ಮೇಲೆ ಹಾರಲು ಆಗದೇ ನೆಲಕ್ಕೆ ಬಿದ್ದಿದೆ. ಅದನ್ನು ಗಮನಿಸಿದ ವೈದ್ಯರು ಇದು ಮೇಲೆ ಹಾರಲು ತುಂಬಾ ದಪ್ಪಾ ಇದೆ. ಅದಕ್ಕೆ ಆಗುತ್ತಿಲ್ಲ. ಈ ಗಿಡುಗಕ್ಕೆ ʼಮೇಲೆ ಹಾರಲು ತುಂಬಾ ಕೊಬ್ಬುʼ ಎಂದು ತಮಾಷೆಯಾಗಿ ಕರೆದರು.
ಗಿಡುಗದ ಅಸಲಿ ಕತೆ ಏನು?
ಈ ಗಿಡುಗ ಪ್ರತಿದಿನ ಅದು ತನ್ನ ಹೊಟ್ಟೆಪಾಡಿಗಾಗಿ ಕೋಳಿಗಳನ್ನ ಬೇಟೆ ಆಡುತ್ತಿತ್ತು. ದಿನಾ ಕೋಳಿಗಳನ್ನ ಬೇಟೆ ಆಡಿ ಹೊಟ್ಟೆ ತುಂಬಾ ತಿನ್ನುತ್ತಿತ್ತು. ಹೊಟ್ಟೆ ತುಂಬಿದ ಮೇಲೆ ಅದು ಮರದ ಮೇಲೆ ಹಾಯಾಗಿ ನಿದ್ದೆ ಮಾಡುತ್ತಿತ್ತು. ಅದುವೇ ಅದರ ನಿತ್ಯದ ಕಾಯಕವಾಗಿ ಬಿಟ್ಟಿತು. ಹೀಗೆ ಕೋಳಿ ತೀಂದೂ ತಿಂದು ಸುಖ ಜೀವನ ಮಾಡುತ್ತಿದ್ದ ಗಿಡುಗನಿಗೆ ಆಪತ್ತು ಕಾಣಿಸಿಕೊಂಡಿತು. ದೇಹದಲ್ಲಿ ಕೊಬ್ಬಿನಾಂಶ ಜಾಸ್ತಿಯಾಗಿ ಮೇಲೆ ಹಾರಲು ಸಾಧ್ಯವಾಗದೇ ನೆಲಕ್ಕೆ ಉದುರಿ ಬಿದ್ದಿತ್ತು. ಈ ಮಾಹಿತಿಯನ್ನ Southwest Virginia Wildlife Center of Roanoke ಎಂಬ ಫೇಸ್ಬುಕ್ ಪೇಜ್ ಹಂಚಿಕೊಂಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಗಿಡುಗನ ಪರಿಸ್ಥಿತಿ ನೋಡಿದ ಜನರು ತಮಾಷೆಯಾಗಿ ಕಾಮೆಂಟ್ ಮಾಡಲು ಶುರುಮಾಡಿದ್ದಾರೆ. ಗಿಡುಗಗಳಿಗೂ ಆಹಾರ ಪದ್ದತಿ ಬೇಕು. ಇಲ್ಲದಿದ್ದರೆ ಹೀಗೆ ಆಗುತ್ತದೆ. ಅದಕ್ಕೆ ಡಯಟ್ ಮಾಡಲು ಹೇಳಿ ಎಂದು ನಕ್ಕಿದ್ದಾರೆ. ಇನ್ನು ವೈದ್ಯರು ಈ ಗಿಡುಗಕ್ಕೆ ಕೊಬ್ಬು ಅಂದಿರೋದು ಕೆಲವರ ಸಮಾಧಾನಕ್ಕೆ ಕಾರಣವಾಗಿದೆ. ನೀವು ಕಾಡು ಹಕ್ಕಿಯನ್ನು ಹೇಗೆ ಆಹಾರ ಕ್ರಮದಲ್ಲಿ ಇರಿಸುತ್ತಿರಿ? ಕಾಡು ಹಕ್ಕಿಗೆ ಕೋಳಿಗಳನ್ನ ರಾಜಾರೋಷವಾಗಿ ತಿನ್ನಲು ಬಿಟ್ಟರೆ ಆಗೋದು ಇದೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಂದರೆ ಹೊಟ್ಟೆ ತುಂಬಾ ತಿಂದು ಸೋಮಾರಿಯಾಗಿ ಈಗ ಅದರ ಜೀವನ ಶೈಲಿಯೇ ಅದಕ್ಕೆ ಮುಳ್ಳಾಗಿದೆ. ಈ ಗಿಡುಗನಿಂದ ನಾವೆಲ್ಲರೂ ಕಲಿಯಬೇಕಾದದ್ದು ತುಂಬಾ ಇದೆ ಎಂದು ಚರ್ಚೆ ಆಗ್ತಿದೆ.














