Asianet Suvarna News Asianet Suvarna News

ವೈದ್ಯರಿಲ್ಲದ್ದಕ್ಕೆ ತಾನೇ ಶಸ್ತ್ರಚಿಕಿತ್ಸೆ ಮಾಡಿದ ಮಿಜೋರಂ ಶಾಸಕ!

ಮೀಜೋ ನ್ಯಾಷನಲ್‌ ಫ್ರಂಟ್‌'ನ ಶಾಸಕರಾಗಿರುವ ಡಾ| ಕೆ. ಬೀಚುವಾ ಶಾಸಕರಾದ ಬಳಿಕ ಅಂದರೆ 38 ತಿಂಗಳ ಅವಧಿಯಲ್ಲಿ ಮಾಡಿದ ಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ.

mizoram mla beichhua performs surgery while doctor was on leave

ಐಜ್ವಾಲ್‌: ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದನ್ನು ಮನ​ಗಂಡ ಶಾಸಕರೊಬ್ಬರು ತಾವೇ ಸರ್ಜರಿ ನಡೆಸಿರುವ ಘಟನೆ ಮೀಜೋರಂನಲ್ಲಿ ನಡೆದಿದೆ! ಶಾಸಕರು ಶಸ್ತ್ರಚಿಕಿತ್ಸೆ ಮಾಡುವುದೂ ಉಂಟೇ? ಎಂದು ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ, ಸರ್ಜರಿ ಮಾಡಿದ ವ್ಯಕ್ತಿ, ಶಾಸಕರಾಗುವ ಮುನ್ನ 20 ವರ್ಷಗಳ ಕಾಲ ಸರ್ಕಾರಿ ವೈದ್ಯರಾಗಿ ಕೆಲಸ ಮಾಡಿದವರು. ಮೀಜೋ ನ್ಯಾಷನಲ್‌ ಫ್ರಂಟ್‌'ನ ಶಾಸಕರಾಗಿರುವ ಡಾ| ಕೆ. ಬೀಚುವಾ ಶಾಸಕರಾದ ಬಳಿಕ ಅಂದರೆ 38 ತಿಂಗಳ ಅವಧಿಯಲ್ಲಿ ಮಾಡಿದ ಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ.

ಆಗಿದ್ದು ಹೇಗೆ?
35 ವರ್ಷದ ತುಂಬು ಗರ್ಭಿಣಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ಮಿಜೋರಾಂನ ಸಹಾಯ್ ಸಿವಿಲ್ ಆಸ್ಪತ್ರೆಗೆ ಹೋಗುತ್ತಾರೆ. ಅವರ ಹೊಟ್ಟೆಯಲ್ಲಿ ದೊಡ್ಡ ರಂಧ್ರ ಕಾಣಿಸಿಕೊಂಡಿರುತ್ತದೆ. ತುರ್ತಾಗಿ ಆಕೆಗೆ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿರುತ್ತದೆ. ಆದರೆ, ಆಸ್ಪತ್ರೆಯ ಸರ್ಜನ್ ಯಾವುದೋ ತರಬೇತಿ ಕಾರ್ಯಾಗಾರದ ನಿಮಿತ್ತ ಹೊರಹೋಗಿರುತ್ತಾರೆ. ಇದೇ ವೇಳೆ, 52 ವರ್ಷದ ಶಾಸಕ ಡಾ. ಬೀಚುವಾ ಅವರು ತಮ್ಮ ಕ್ಷೇತ್ರಕ್ಕೆ ಭೇಟಿಕೊಟ್ಟಿರುತ್ತಾರೆ. ಆಸ್ಪತ್ರೆಯಲ್ಲಿ ಗರ್ಭಿಣಿಗೆ ಆಗಿರುವ ತೊಂದರೆಯ ಕುರಿತು ಶಾಸಕರಿಗೆ ಮಾಹಿತಿ ಹೋಗುತ್ತದೆ. ಕೂಡಲೇ ಅವರು ತಮ್ಮ ಕಾರ್ಯಕ್ರಮಗಳನ್ನೆಲ್ಲಾ ಬದಿಗೊತ್ತಿ ಆಸ್ಪತ್ರೆಗೆ ಧಾವಿಸಿ ಹೋಗಿ 35 ವರ್ಷದ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಒಂದು ವೇಳೆ ಆ ಮಹಿಳೆಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡದೇಹೋಗಿದ್ದರೆ ಪ್ರಾಣ ಹೋಗವ ಅಪಾಯವಿತ್ತೆನ್ನಲಾಗಿದೆ.

ಒಟ್ಟಿನಲ್ಲಿ, ಡಾ. ಬೀಚುವಾ ಅವರು ರಾಜಕಾರಣಿಗಳಿಗಷ್ಟೇ ಅಲ್ಲ ಸಮಾಜದ ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯ ಮಾಡಿದ್ದಾರೆ.

Follow Us:
Download App:
  • android
  • ios