ತೃಣಮೂಲ ಕಾಂಗ್ರೆಸ್ ರಾಜ್ಯಸಭೆ ಸಂಸದ ಮಿಥುನ್ ಚಕ್ರವರ್ತಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ನವದೆಹಲಿ (ಡಿ. 26): ತೃಣಮೂಲ ಕಾಂಗ್ರೆಸ್ ರಾಜ್ಯಸಭೆ ಸಂಸದ ಮಿಥುನ್ ಚಕ್ರವರ್ತಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಿಥುನ್ ಚಕ್ರವರ್ತಿ ತಮ್ಮ ರಾಜಿನಾಮೆ ಪತ್ರವನ್ನು ರಾಜ್ಯಸಭಾ ಚೇರ್ ಮನ್ ಹಮೀದ್ ಅನ್ಸಾರಿಗೆ ಸಲ್ಲಿಸಿದ್ದಾರೆ. ಅನಾರೋಗ್ಯ ಕಾರಣದಿಂದ ರಾಜಿನಾಮೆ ನೀಡಿದ್ದಾರೆಂದು ತೃಣಮೂಲ ಕಾಂಗ್ರೆಸ್ ಹೇಳಿದೆ.

ಕಡಿಮೆ ಹಾಜರಾತಿ, 3 ದಿನಗಳಿಗೊಮ್ಮೆ ಸಂಸತ್ತಿಗೆ ಹಾಜರಾಗುವುದು, ಯಾವುದೇ ಚರ್ಚೆಯಲ್ಲಿ ಭಾಗವಹಿಸದೇ ಇರುವುದು ಅಥವಾ ಸದನದಲ್ಲಿ ಪ್ರಶ್ನೆಯನ್ನೇ ಕೇಳುವುದಿಲ್ಲ ಎಂಬ ಆರೋಪ ಮಿಥುನ್ ಚಕ್ರವರ್ತಿ ಮೇಲಿದೆ.