ನಾಡಹಬ್ಬ ದಸರಾ ಆಹ್ವಾನ ಪತ್ರಿಕೆಯಲ್ಲಿ ಆಡಳಿತ ಮಂಡಳಿ ಎಡವಟ್ಟು ಮಾಡಿದೆ. ಖ್ಯಾತ ಕೊಳಲುವಾದಕ ಪ್ರವೀಣ್​ ಗೋಡ್ಕಿಂಡಿರನ್ನು ಪಿಟೀಲುವಾದಕ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

ಮೈಸೂರು (ಸೆ.20): ನಾಡಹಬ್ಬ ದಸರಾ ಆಹ್ವಾನ ಪತ್ರಿಕೆಯಲ್ಲಿ ಆಡಳಿತ ಮಂಡಳಿ ಎಡವಟ್ಟು ಮಾಡಿದೆ. ಖ್ಯಾತ ಕೊಳಲುವಾದಕ ಪ್ರವೀಣ್​ ಗೋಡ್ಕಿಂಡಿರನ್ನು ಪಿಟೀಲುವಾದಕ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

ವಿದೇಶದಲ್ಲೂ ತಮ್ಮ ಕೊಳಲು ವಾದನಕ್ಕೆ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಲಾವಿದ ಪ್ರವೀಣ್​ ಗೋಡ್ಕಿಂಡಿ. ಆದರೆ ಈ ನಮ್ಮ ಕರ್ನಾಟಕ ಸರ್ಕಾರಕ್ಕೆ ಮಾತ್ರ ಪ್ರವೀಣ್ ಗೋಡ್ಕಿಂಡಿ ಯಾವ ವಾದ್ಯ ನುಡಿಸುತ್ತಾರೆ ಎಂದೇ ಇನ್ನೂ ತಿಳಿದಿಲ್ಲ. ನಾಳೆಯಿಂದ 8 ದಿನ ಅರಮನೆ ನಗರಿ ಮೈಸೂರಿನಲ್ಲಿ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದಸರಾ ಸಾಂಸ್ಕೃತಿಕ ಉತ್ಸವ ಸಮಿತಿ ಆಮಂತ್ರಣ ಪತ್ರಿಕೆಯಲ್ಲಿ ಪ್ರವೀಣ್ ಗೋಡ್ಖಿಂಡಿ ಖ್ಯಾತ ಪಿಟೀಲು ವಾದಕರು ಎಂದು ತಪ್ಪಾಗಿ ಮುದ್ರಿಸಿದೆ. ದಸರಾ ಸಾಂಸ್ಕೃತಿ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಈ ರೀತಿ ಎಡವಟ್ಟು ಮಾಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟಿನ ಬಗ್ಗೆ ಪ್ರವೀಣ್​ ಗೋಡ್ಕಿಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.