ಸಂಬಂಧಿಗಳನ್ನು ಭೇಟಿ ಮಾಡಲು ಕರಾಚಿಗೆ ತೆರಳಿದ್ದ ಅವರಿರ್ವರು ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದರು. ಅವರ ನಾಪತ್ತೆಯ ಹಿಂದೆ ಪಾಕಿಸ್ತಾನದ ಗೂಢಾಚರ ಸಂಸ್ಥೆ ಐಎಸ್’ಐಯ ಕೈವಾಡವಿದೆ ಎಂದು ಸಂಶಯಿಸಲಾಗಿತ್ತು.

ನವದೆಹಲಿ (ಮಾ.18): ಸಂಬಂಧಿಕರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಬ್ಬರು ಸೂಫಿ ಧರ್ಮಗುರಗಳು ಪತ್ತೆಯಾಗಿದ್ದು, ಕರಾಚಿಗೆ ವಾಪಸಾಗಿದ್ದಾರೆಂದು ವರದಿಯಾಗಿದೆ.

ನಾಪತ್ತೆಯಾಗಿದ್ದ ಹಜರತ್ ನಿಜಾಮುದ್ದೀನ್ ದರ್ಗಾದ ಧರ್ಮಗುರು ಸಯ್ಯದ್ ಆಸಿಫ್ ಅಲಿ ನಿಜಾಮಿ ಮತ್ತು ಸೂಫಿ ಧರ್ಮಗುರು ನಜಿಮ್ ನಿಜಾಮಿ ಅವರು ಪಾಕಿಸ್ತಾನದ ಸಿಂಧ್’ನಲ್ಲಿ ಪತ್ತೆಯಾಗಿದ್ದಾರೆ ಹಾಗೂ ಮಾ.20ಕ್ಕೆ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

ಸಂಬಂಧಿಗಳನ್ನು ಭೇಟಿ ಮಾಡಲು ಕರಾಚಿಗೆ ತೆರಳಿದ್ದ ಅವರಿರ್ವರು ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದರು. ಅವರ ನಾಪತ್ತೆಯ ಹಿಂದೆ ಪಾಕಿಸ್ತಾನದ ಗೂಢಾಚರ ಸಂಸ್ಥೆ ಐಎಸ್’ಐಯ ಕೈವಾಡವಿದೆ ಎಂದು ಸಂಶಯಿಸಲಾಗಿತ್ತು.

ಭಕ್ತಾದಿಗಳನ್ನು ಭೇಟಿಯಾಗುವ ಉದ್ದೇಶದಿಂದ ಸಿಂಧ್'ಗೆ ಹಳ್ಳಿ ಪ್ರದೇಶಕ್ಕೆ ಹೋಗಿದ್ದಾಗಿಯೂ, ಅಲ್ಲಿ ಮೊಬೈಲ್ ಸಂಪರ್ಕವಿರಲಿಲ್ಲವೆಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.