ಅ.15ರಂದು ಜೆಎನ್‌ಯು ಆವರಣದಲ್ಲಿ ಎಬಿವಿಪಿ ಸದಸ್ಯರ ಜತೆಗಿನ ಮಾತಿನ ಚಕಮಕಿ ಬಳಿಕ ನಜೀಬ್ ಅಹ್ಮದ್ ನಾಪತ್ತೆಯಾಗಿದ್ದಾರೆ.

ನವದೆಹಲಿ(ನ.25): ನಾಪತ್ತೆಯಾಗಿರುವ ಜವಾಹರ್‌'ಲಾಲ್ ನೆಹರೂ ವಿವಿ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ತಾಯಿ, ತಮ್ಮ ಮಗನನ್ನು ಹುಡುಕಿಕೊಡಿ ಎಂದು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.

ಇಂದು ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ ಎಸ್ ಸಿಸ್ತಾನಿ ಮತ್ತು ನ್ಯಾ. ವಿನೋದ್ ಗೋಯೆಲ್ ಅವರಿದ್ದ ಪೀಠ, ವಿದ್ಯಾರ್ಥಿ ನಾಪತ್ತೆ ಪ್ರಕರಣ ಕುರಿತ ನಿಲುವು ತಿಳಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, 3 ದಿನಗಳೊಳಗೆ ತನಿಖೆಯ ವರದಿ ನೀಡುವಂತೆಯೂ ಸೂಚಿಸಿದೆ.

ಅ.15ರಂದು ಜೆಎನ್‌ಯು ಆವರಣದಲ್ಲಿ ಎಬಿವಿಪಿ ಸದಸ್ಯರ ಜತೆಗಿನ ಮಾತಿನ ಚಕಮಕಿ ಬಳಿಕ ನಜೀಬ್ ಅಹ್ಮದ್ ನಾಪತ್ತೆಯಾಗಿದ್ದಾರೆ.