ಬಿಹಾರದ ಬೇಗುಸರಾಯ್ ಜಿಲ್ಲೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಹೀಗಾಗಿ ಕಳೆದು ಹೋಗಿದ್ದ ಸಹೋದರಿಯನ್ನು ನಾಲ್ಕು ವರ್ಷಗಳಿಂದ ಹುಡುಕುತ್ತಿದ್ದ ಸಹೋದರನಿಗೆ ಆಕೆ ಸಿಕ್ಕಿದ್ದಾಳೆ.

ನವದೆಹಲಿ (ಜ.04): ಬಿಹಾರದ ಬೇಗುಸರಾಯ್ ಜಿಲ್ಲೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಹೀಗಾಗಿ ಕಳೆದು ಹೋಗಿದ್ದ ಸಹೋದರಿಯನ್ನು ನಾಲ್ಕು ವರ್ಷಗಳಿಂದ ಹುಡುಕುತ್ತಿದ್ದ ಸಹೋದರನಿಗೆ ಆಕೆ ಸಿಕ್ಕಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮ್ ಮೋಹನ್ (ಹೆಸರು ಬದಲಾಯಿಸಲಾಗಿದೆ) ಕಳೆದ ನಾಲ್ಕು ವರ್ಷಗಳಿಂದ ಸಹೋದರಿಯನ್ನು ಹುಡುಕುತ್ತಿದ್ದರು. ಆದರೆ ಸಿಕ್ಕಿರಲಿಲ್ಲ. ಹಡಗು ಕಂಪನಿಯೊಂದರಲ್ಲಿ ಕೆಲಸ ಮಾಡುವ ರಾಮ್ ಮೋಹನ್ ಕೆಲಸದ ಸಲುವಾಗಿ ಬಾಕ್ರಿ ಹಳ್ಳಿಗೆ ಬರುತ್ತಾರೆ. ಅಲ್ಲಿನ ವೇಶ್ಯಾವಾಟಿಕೆ ಅಡ್ಡದಲ್ಲಿ ಸಹೋದರಿಯನ್ನು ನೋಡುತ್ತಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರು ಯುವತಿಯರನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದು ಇನ್ನೊಬ್ಬ ತಪ್ಪಿಸಿಕೊಂಡಿದ್ದಾನೆ.

ರಾಮ್ ಮೋಹನ್ ಸಹೋದರಿಯನ್ನು ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರು ವೇಶ್ಯಾವಾಟಿಕೆಗೆ ಮಾರಿದ್ದರು.