ಮದರಸಾದ ಬಾಗಿಲಿಗೆ ಚಿಲಕ ಹಾಕಿತ್ತಾದರೂ ಬೀಗ ಹಾಕಿರಲಿಲ್ಲ. ಇದರಿಂದ ಸುಲಭವಾಗಿ ಮದರಸಾದೊಳಗೆ ನುಗ್ಗಿದ ಕಿಡಿಗೇಡಿಗಳು ನಮಾಝ್‌ಗೆ ಬಳಸುವ ಮುಸಲ್ಲಾವನ್ನು ಡೆಸ್ಕ್‌ನ ಮೇಲಿಟ್ಟು ಬೆಂಕಿ ಹಚ್ಚಿದ್ದಾರೆ.

ಬಂಟ್ವಾಳ: ಮದರಸಾವೊಂದರ ಬಾಗಿಲು ತೆರೆದು ಒಳಗೆ ಪ್ರವೇಶಿದ ಕಿಡಿಗೇಡಿಗಳು ಮರದ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಪೊಲೀಸ್‌ ಠಾಣಾ ವ್ಯಾಪ್ತಿಯ ಕುಕ್ಕಿಪ್ಪಾಡಿ ಗ್ರಾಮದ ಎಲ್ಪೆಲ್‌ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದರಸಾದ ಬಾಗಿಲಿಗೆ ಚಿಲಕ ಹಾಕಿತ್ತಾದರೂ ಬೀಗ ಹಾಕಿರಲಿಲ್ಲ. ಇದರಿಂದ ಸುಲಭವಾಗಿ ಮದರಸಾದೊಳಗೆ ನುಗ್ಗಿದ ಕಿಡಿಗೇಡಿಗಳು ನಮಾಝ್‌ಗೆ ಬಳಸುವ ಮುಸಲ್ಲಾವನ್ನು ಡೆಸ್ಕ್‌ನ ಮೇಲಿಟ್ಟು ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಮಾವಿನಕಟ್ಟೆಜುಮಾ ಮಸೀದಿ ಅಧ್ಯಕ್ಷ ಅಬ್ದುಲ್‌ ರಝಾಕ್‌ ಪುಂಜಾಲಕಟ್ಟೆಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.