ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡು ವಿಕೃತಿ ಮೆರೆದ ಬಾಲಕನೋರ್ವನನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. 

ಬೆಂಗಳೂರು : ಮನೆ ಬಳಿ ರಂಗೋಲಿ ಹಾಕುತ್ತಿದ್ದ ಮಹಿಳೆ ನಿಂತು 16 ವರ್ಷದ ಬಾಲಕನೊಬ್ಬ ಹಸ್ತಮೈಥುನ ಮಾಡಿಕೊಂಡು ವಿಕೃತವಾಗಿ ವರ್ತಿಸಿರುವ ಘಟನೆ ಮಡಿವಾಳದಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ಬಾಲಕನ ವಿರುದ್ಧ ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಭಾರತ ಮೂಲದ ಮಹಿಳೆ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಮಹಿಳೆ ಪತಿ ಜತೆ ಮಡಿವಾಳದ ಕಾವೇರಿ ಕನ್ವೆಂಟ್‌ ಸಮೀಪದ ವಿ.ಪಿ.ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸೆ.6ರಂದು ಮಹಿಳೆಯ ಪತಿ ಕೆಲಸಕ್ಕೆ ಹೋಗಿದ್ದರು. ಮಹಿಳೆ ಮಧ್ಯಾಹ್ನ 12.35ರ ಸುಮಾರಿಗೆ ಮನೆಯ ಬಾಲ್ಕನಿಯಲ್ಲಿ ರಂಗೋಲಿ ಬಿಡಿಸುತ್ತಿದ್ದರು. ಈ ವೇಳೆ ನೆರೆ ಮನೆ ನಿವಾಸಿ ಬಾಲಕ ಮಹಿಳೆ ನೋಡುತ್ತಾ ಪ್ಯಾಂಟ್‌ ಬಿಚ್ಚಿ ಹಸ್ತ ಮೈಥುನ ಮಾಡಿಕೊಂಡು ವಿಕೃತವಾಗಿ ವರ್ತಿಸಿದ್ದಾನೆ.

ಬಾಲಕನ ವರ್ತನೆ ನೋಡಿ ಮಹಿಳೆ ಮನೆ ಒಳಗೆ ಹೋಗಿದ್ದಾರೆ. ಬಳಿಕ ಪತಿ ಜತೆ ಬಂದು ಠಾಣೆಗೆ ದೂರು ನೀಡಿದ್ದಾರೆ. ಬಾಲಕ ಈ ಹಿಂದೆ ಮಹಿಳೆ ಮನೆ ಎದುರು ನಿಂತು ಮದ್ಯ ಹಾಗೂ ಧೂಮಪಾನ ಸೇವಿಸಿ ಅಸಭ್ಯವಾಗಿ ವರ್ತಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಮಹಿಳೆ ನೀಡಿದ ದೂರು ಆಧಾರಿಸಿ ಬಾಲಕನನ್ನು ಬಂಧಿಸಿ, ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.