Asianet Suvarna News Asianet Suvarna News

ಯುಪಿಎಗಿಂತ ಮೋದಿ ಆಳ್ವಿಕೆಯಲ್ಲೇ ಅಲ್ಪಸಂಖ್ಯಾತರು ಸುರಕ್ಷಿತ: ಆರ್‌ಟಿಐ

ಯುಪಿಎಗಿಂತ ಮೋದಿ ಆಳ್ವಿಕೆಯಲ್ಲೇ ಅಲ್ಪಸಂಖ್ಯಾತರು ಸುರಕ್ಷಿತ: ಆರ್‌ಟಿಐ| ಕೋಮುಗಲಭೆ, ಸಾವಿನ ಪ್ರಮಾಣ ಎನ್‌ಡಿಎ ಅವಧಿಯಲ್ಲಿ ಕಡಿಮೆ

minority people are safe in india under modi govt
Author
New Delhi, First Published Jan 8, 2019, 12:24 PM IST

ನವದೆಹಲಿ[ಜ.08]: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರಬಹುದು. ಆದರೆ 10 ವರ್ಷಗಳ ಯುಪಿಎ ಅಧಿಕಾರಾವಧಿಗೆ ಹೋಲಿಸಿದರೆ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಅಷ್ಟೇನೂ ಅಪಾಯ ಎದುರಾಗಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಲಭಿಸಿರುವ ಅಂಕಿ-ಅಂಶಗಳು ಹೇಳುತ್ತಿವೆ.

2004ರಿಂದ 2017ರವರೆಗೆ ದೇಶದಲ್ಲಿ ನಡೆದ ಕೋಮುಗಲಭೆಗಳು, ಅದರಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಆರ್‌ಟಿಐನಡಿ ನೀಡಿದೆ.

ಅದರ ಪ್ರಕಾರ, 2004ರಿಂದ 2017ರವರೆಗೆ ದೇಶದಲ್ಲಿ 10399 ಕೋಮುಗಲಭೆಗಳು ಸಂಭವಿಸಿ, 1605 ವ್ಯಕ್ತಿಗಳು ಮೃತಪಟ್ಟಿದ್ದಾರೆ. 30723 ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಯುಪಿಎ ಅಧಿಕಾರದಲ್ಲಿದ್ದ 2004ರಿಂದ 2008ರವರೆಗೆ 3858 ಘಟನೆಗಳು ಸಂಭವಿಸಿದ್ದರೆ, ಯುಪಿಎ ಎರಡನೇ ಅವಧಿಯಾದ 2009ರಿಂದ 2013ರವರೆಗೆ 3621 ಗಲಭೆಗಳು ಸಂಭವಿಸಿವೆ. ಆದರೆ, 2004ರಿಂದ 2017ರವರೆಗೆ 2920 ಗಲಭೆಗಳು ಉಂಟಾಗಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.

10 ವರ್ಷಗಳ ಯುಪಿಎ ಅವಧಿಯಲ್ಲಿ ಕೋಮುಗಲಭೆಗಳಿಂದ 1216 ಮಂದಿ ಸಾವನ್ನಪ್ಪಿದ್ದರೆ, 2014ರಿಂದ 2017ರವರೆಗಿನ ಬಿಜೆಪಿ ಅವಧಿಯಲ್ಲಿ 389 ಮೃತಪಟ್ಟಿದ್ದಾರೆ ಎಂದು ಹೇಳಿವೆ.

Follow Us:
Download App:
  • android
  • ios