ಪ್ರೀತಿಸಲು ನಿರಾಕರಿಸಿದ ಅಪ್ರಾಪ್ತೆಯನ್ನು, ಅಪ್ರಾಪ್ತ ಬಾಲಕ ಮಹಡಿಯಿಂದ ತಳ್ಳಿ, ಕೊಲೆ ಯತ್ನ ನಡೆಸಿರುವ  ಘಟನೆ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಂಡ್ಯ(ಮಾ.24): ಪ್ರೀತಿಸಲು ನಿರಾಕರಿಸಿದ ಅಪ್ರಾಪ್ತೆಯನ್ನು, ಅಪ್ರಾಪ್ತ ಬಾಲಕ ಮಹಡಿಯಿಂದ ತಳ್ಳಿ, ಕೊಲೆ ಯತ್ನ ನಡೆಸಿರುವ ಘಟನೆ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಂಡ್ಯದ ಕೊಮ್ಮೇರಹಳ್ಳಿಯ ಬಿಜಿಎಸ್​ ಶಾಲೆಯಲ್ಲಿ ಬಾಲಕಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಅದೇ ಶಾಲೆಯ 9ನೇ ತರಗತಿಯಲ್ಲಿ ಓದತ್ತಿದ್ದ ಮಂಗಳೂರು ಮೂಲದ ವಿದ್ಯಾರ್ಥಿಯೊಬ್ಬ, ಬಾಲಕಿಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ನಿರಾಕರಿಸಿದಕ್ಕೆ ಬಾಲಕಿಯನ್ನ 4ನೇ ಅಂತಸ್ತಿನಿಂದ ಕೆಳಗೆ ತಳ್ಳಿದ್ದಾನೆ. ಆದ್ರೆ ವಿದ್ಯಾಸಂಸ್ಥೆ, ಬಾಲಕಿಯೇ ತಲೆ ಸುತ್ತು ಬಂದು ಕೆಳಗೆ ಬಿದ್ದಿದ್ದಾಳೆಂದು ಹೇಳಿ ಘಟನೆ ಮರೆಮಾಚಲು ಯತ್ನಿಸಿದ್ದಾರೆ.

ಗಂಭೀರ ಗಾಯಗೊಂಡಿದ್ದ ಬಾಲಿಕಿ ಆಸ್ಪತ್ರೆ ಸೇರಿ, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾಳೆ. ವಿದ್ಯಾಸಂಸ್ಥೆ ಬಾಲಕಿಯ ಪೋಷಕರ ಬಳಿಯೂ ವಿದ್ಯಾರ್ಥಿನಿ ತಲೆ ಸುತ್ತು ಬಂದು ಕೆಳಗೆ ಬಿದ್ದಿದ್ದಳೆಂದು ತಿಳಿಸಿದ್ದೆರಂತೆ. ಆದರೆ ಕೆಲ ದಿನಗಳ ಬಳಿಕ ಬಾಲಕಿ ಚೇತರಿಸಿಕೊಂಡಾಗ ಪೋಷಕರ ಬಳಿ ನಿಜ ವಿಚಾರ ತಿಳಿಸಿದ ಬಾಲಕಿ ವಿದ್ಯಾರ್ಥಿ ಕೃತ್ಯ ಎಸಗಿರೋದನ್ನು ಬಾಯಿಬಿಟ್ಟಿದ್ದಾಳೆ.

ಸತ್ಯ ತಿಳಿದ ಪೋಷಕರು ಮಂಡ್ಯದ ಸೆಂಟ್ರಲ್ ಠಾಣೆಯಲ್ಲಿ ಶಾಲೆ ಮತ್ತು ವಿದ್ಯಾರ್ಥಿ ವಿರುದ್ದ ದೂರು ದಾಖಲಿಸಿದ್ದಾರೆ.