ರಾಜಸ್ಥಾನದ ಜಯ್ಪುರ ಎಂಬ ಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಮದುವೆಯಾಗಲು ಬಂದಿದ್ದ ಮದುಮಗ ಚೌಧರಿ ಗಣಪತಿ ಸಿಂಹ ಹಾಗೂ ಆತನೊಂದಿಗೆ ಬಂದಿದ್ದ ಅಳಿಯ ರಾಮ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ(ಜ.17): ರಾಜಸ್ಥಾನದ ಜಯ್ಪುರ ಎಂಬ ಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಮದುವೆಯಾಗಲು ಬಂದಿದ್ದ ಮದುಮಗ ಚೌಧರಿ ಗಣಪತಿ ಸಿಂಹ ಹಾಗೂ ಆತನೊಂದಿಗೆ ಬಂದಿದ್ದ ಅಳಿಯ ರಾಮ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಇವರಿಬ್ಬರ ಇನೋವಾ ಕಾರನ್ನೂ ವಶಪಡಿಸಿಕೊಂಡಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕಿ ಪೂನಂ ಕುಮಾರಿ(ಕಾಲ್ಪನಿಕ ಹೆಸರು)ಯ ವಿವಾಹ ಗಣಪತಿ ಸಿಂಹನೊಂದಿಗೆ ನಿಶ್ಚಯವಾಗಿತ್ತು. ಆದರೆ ಇದೀಗ ಮದುವೆ ಗಂಡು ಹಾಗೂ ಆತನ ಭಾವನನ್ನು ಬಂಧಿಸಿದ ಪೊಲೀಸರು ಪೂನಂನನ್ನು ವಿಚಾರಣೆಗೊಳಪಡಿದ್ದಾರೆ. ಈ ವೇಳೆ ಮುಗ್ಧ ಬಾಲಕಿ ಅನೇಕ ಬೆಚ್ಚಿ ಬೀಳುವ ಮಾಹಿತಿಯನ್ನು ಬಾಯ್ಬಿಟ್ಟಿದ್ದಾಳೆ. 'ನಾನು ಅಪ್ರಾಪ್ತ ಬಾಲಕಿ, ನನ್ನ ತಾಯಿ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸುತ್ತಿದ್ದಾರೆ. ಆದರೆ ನನಗೆ ಈಗ ಮದುವೆ ಇಷ್ಟವಿಲ್ಲ' ಎಂದು ನಿರಾಕರಿಸಿದ್ದೆ'.

'ಮದುವೆಯಾಗುವ ಗಂಡಿನ ಮನೆಯೂ ಬಹಳ ದೂರವಿದೆ. ನನ್ನ ಕುಟುಂಬಸ್ಥರೂ ಈ ಸಂಬಂಧದಿಂದ ಖುಷಿಯಾಗಿಲ್ಲ. ನಾನಗೆ ಗಂಡಿನ ಪರಿಚಯವೂ ಇಲ್ಲ ಆತನ ಮನೆಯವರ ಬಗ್ಗೆಯೂ ನನಗೆ ತಿಳಿದಿಲ್ಲ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣದಿಂದ ನಾನು ಶಾಲೆಗೆ ಹೋಗುವುದನ್ನೂ ಬಿಟ್ಟಿದ್ದೆ. ಮದುವೆಗೆ ಎರಡು ದಿನವಿದ್ದಾಗ ಅಮ್ಮ ನನಗೆ ತಿಳಿಸಿದ್ದಾಳೆ. 'ನಿನ್ನ ಮದುವೆಯನ್ನು ಮಾಡಿಸಿದ ಬಳಿಕ ನಿನ್ನ ತಂಗಿಯಂದಿರ ಮದು8ವೆ ಮಾಡಿಸಬೇಕು' ಎಂದು ಒತ್ತಾಯ ಮಾಡುತ್ತಿದ್ದಾಳೆ' ಎಂದು ಅಪ್ರಾಪ್ತ ಬಾಲಕಿ ತಿಳಿಸಿದ್ದಾಳೆ.

ಸೋಮವಾರ ಬೆಳಿಗ್ಗೆ ಈ ಬಾಲಕಿ ಮದುವೆ ನಿಶ್ಚಯಗೊಂಡಿದ್ದ ಯುವಕನೊಂದಿಗೆ ಮದುವೆ ಉಡುಪುಗಳನ್ನು ಖರೀದಿಸಿದ್ದಾಳೆ. ಈ ವೇಳೆ ಅದ್ಯಾರೋ ಈ ಕುರಿತಾಗಿ ಮಕ್ಕಳ ಕಲ್ಯಾಣ ಕೇಂದ್ರ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಯುವಕ ಹಾಗೂ ಆತನ ಭಾವನನ್ನು ಬಂಧಿಸಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಬಾಲಕಿ ಬಾಯ್ಬಿಟ್ಟ ಸತ್ಯದಿಂದಾಗಿ ಇದೀಗ ಕುಟುಂಬಸ್ಥರು ಸಮಸ್ಯೆಗೀಡಾಗಿದ್ದಾರೆ.