ಸೌದಿಯಲ್ಲಿ ಪವಿತ್ರ ರಂಜಾನ್ ಆಚರಿಸುತ್ತಿರುವ ಜಮೀರ್ ಅಹ್ಮದ್ಉಮರಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಚಿವಆಪ್ತರ ಸಮೇತ ಉಮರಾದಲ್ಲಿ ವಿಶೇಷ ರಂಜಾನ್ ಪ್ರಾರ್ಥನೆಕರ್ನಾಟಕದ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥನೆ    

ರಿಯಾದ್[ಜೂ.೧೫]: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನೂತನ ಸಚಿವರಾಗಿ ನೇಮಕವಾಗಿರುವ ಜಮೀರ್ ಅಹ್ಮದ್ ಖಾನ್, ಸೌದಿ ಅರೆಬಿಯಾದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ.

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಚಿವ ಜಮೀರ್ ಅಹ್ಮದ್, ಸೌದಿಯ ಉಮರಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಬಾರಿಯ ರಂಜಾನ್ ಹಬ್ಬವನ್ನು ಸೌದಿಯಲ್ಲೇ ಆಚರಿಸಲು ನಿರ್ಧರಿಸಿದ್ದ ಜಮೀರ್, ಅದತರಂತೆ ಆಪ್ತರ ಸಮೇತ ಉಮರಾಗೆ ಬಂದಿಳಿದಿದ್ದಾರೆ.

ಕರ್ನಾಟಕ ರಾಜ್ಯದ ಜನರಿಗೆ ಒಳಿತಾಗಲಿ, ಪವಿತ್ರ ರಂಜಾನ್ ಹಬ್ಬ ಎಲ್ಲರಿಗೂ ಶುಭ ನೀಡಲಿ ಎಂದು ಜಮೀರ್ ಪ್ರಾರ್ಥಿಸಿದ್ದಾಗಿ ಮೂಲಗಳು ತಿಳಿಸಿವೆ. ದೇಶದ ಹಾಗೂ ರಾಜ್ಯದ ಜನರಿಗೆ ಆರೋಗ್ಯ ಸುಖ ಸಂಪತ್ತು ಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾಗಿ ಜಮೀರ್ ಕೂಡ ತಿಳಿಸಿದ್ದಾರೆ.