ಮೋದಿಯೊಬ್ಬ ಹಿಟ್ಲರ್: ವಿನಯ್ ಕುಲಕರ್ಣಿ

Minister Vinay Kulkarni Slams Narendra Modi
Highlights

ಐಟಿ‌ ದಾಳಿ‌ ಖಂಡಿಸಿದ ವಿನಯ ಕುಲಕರ್ಣಿ ಮೋದಿ ಹಿಟ್ಲರ್ ನಂತೆ‌ ವರ್ತಿಸುತ್ತಿದ್ದಾರೆ. ಮೋದಿ ಆಡಳಿತ ನೋಡಿದರೆ ಹಿಟ್ಲರ್ ನೆನೆಪಾಗುತ್ತಾರೆ ಎಂದು ಹೇಳಿದ್ದಾರೆ.  

ಧಾರವಾಡ (ಮಾ. 22): ಐಟಿ‌ ದಾಳಿ‌ ಖಂಡಿಸಿದ ವಿನಯ ಕುಲಕರ್ಣಿ ಮೋದಿ ಹಿಟ್ಲರ್'ನಂತೆ‌ ವರ್ತಿಸುತ್ತಿದ್ದಾರೆ. ಮೋದಿ ಆಡಳಿತ ನೋಡಿದರೆ ಹಿಟ್ಲರ್ ನೆನೆಪಾಗುತ್ತಾರೆ ಎಂದು ಹೇಳಿದ್ದಾರೆ.  

ಎಲ್ಲರನ್ನೂ ಭಯದ ವಾತಾವರಣದಲ್ಲಿ ಇಡಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಐಟಿ ಇಲಾಖೆ ಬಳಸಿಕೊಂಡು ಕಳೆದ 7-8 ತಿಂಗಳಿನಿಂದ ಹೆದರಿಸುವ ಪ್ರಯತ್ನ ಮಾಡುತ್ತಿದೆ. ಇದನ್ನು ‌ನೋಡಿದರೆ ಬಿಜೆಪಿ ನಾಯಕರು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಈ ಕುರಿತು ಪಕ್ಷದ ಮಟ್ಟದಲ್ಲಿ ಸಾಕಷ್ಟು ಚರ್ಚೆ ಪ್ರಾರಂಭವಾಗಿದ್ದು ಗಂಭೀರ ‌ಚಿಂತನೆ ನಡೆಸಲಾಗುವುದು ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ  ಲಿಂಗಾಯತ ಧರ್ಮದ ವಿಚಾರವಾಗಿ ಮಾತನಾಡುತ್ತಾ,  ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ.  ಕಳೆದ ಬಾರಿ ಯಾವುದೇ ದಾಖಲೆ ಇಲ್ಲದೇ ಕಳುಹಿಸಲಾಗಿತ್ತು.  ಈ ಬಾರಿ ಸಾಕಷ್ಟು ದಾಖಲೆ‌ ನೀಡಲಾಗಿದೆ. ಈ ಬಾರಿ ತಿರಸ್ಕೃತ ವಾಗದಂತೆ ದಾಖಲೆ ನೀಡಲಾಗಿದೆ. ಮಾನ್ಯತೆ ದೊರೆಯುವ ನಿರೀಕ್ಷೆ ಇದೆ ಎಂದಿದ್ದಾರೆ. 

loader