ಮಂಗಳವಾರ ರಾತ್ರಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಖಾದರ್ | ಸತತ ಪ್ರಯಾಣ ಹಾಗೂ ಕಾರ್ಯ ನಿಬಿಡತೆಗಳಿಂದಾಗಿ ಕಳೆದೊಂದು ವಾರದಿಂದ ತೀವ್ರ ಕಾಲು ನೋವು

ಮಂಗಳೂರು, ಸೆ.4: ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಾದರ್ ಎಡಗಾಲಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆಯಲು ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇತ್ತೀಚಿನ ತಿಂಗಳಲ್ಲಿ ರಾಜ್ಯ ಹಾಗೂ ಜಿಲ್ಲೆಯಾದ್ಯಂತ ಹೆಚ್ಚಿನ ಸತತ ಪ್ರಯಾಣ ಹಾಗೂ ಕಾರ್ಯ ನಿಬಿಡತೆಗಳಿಂದಾಗಿ ಕಳೆದೊಂದು ವಾರದಿಂದ ತೀವ್ರ ಕಾಲು ನೋವು ಪ್ರಾರಂಭವಾಗಿತ್ತು. ವೈದ್ಯರ ಸಲಹೆ ಮೇರೆಗೆ ಇತ್ತೀಚೆಗೆ ತಾತ್ಕಾಲಿಕ ಚಿಕಿತ್ಸೆ ಪಡೆದಿದ್ದರು. ಮತ್ತೇ ನೋವು ಮರುಕಳಿಸಿದೆ ಎನ್ನಲಾಗಿದೆ.

ವೈದ್ಯರ ಸಲಹೆ ಮೇರೆಗೆ ಬುಧವಾರದಿಂದ ಐದು (5) ದಿನಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಕಚೇರಿಯ ಪ್ರಕಟನೆ ತಿಳಿಸಿದೆ.

ಸಾರ್ವಜನಿಕರು ಈ ಸಂದರ್ಭದಲ್ಲಿ ಯಾವುದೇ ಕೆಲಸಕ್ಕಾಗಿ ಸಚಿವರ ಆಪ್ತ ಸಹಾಯಕರಾದ ಲಿಬ್ಜೆತ್ (7204440444), ವಿಜಯ್ (9343346439) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.