ಅನ್ನಭಾಗ್ಯ ಯೋಜನೆಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನೂ ಹಾಕಬೇಕು ಅಂತ ಬಿಜೆಪಿ ನಾಯಕರು ಹೇಳುತ್ತಾರೆ ಅನ್ನೋದಾದ್ರೇ, ದೇಶದ ಜನರಿಗೆ ಮೋದಿ ಯಾರೂ ಎಂದೇ ಗೊತ್ತಿಲ್ಲ ಎಂದಂತಾಯಿತು - ಹೀಗೆ ಬಿಜೆಪಿ ನಾಯಕರ ವ್ಯಂಗ್ಯವಾಡಿದ್ದು ಆಹಾರ ಸಚಿವ ಯು.ಟಿ. ಖಾದರ್!
ಬೆಂಗಳೂರು (ಏ.04): ಅನ್ನಭಾಗ್ಯ ಯೋಜನೆಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನೂ ಹಾಕಬೇಕು ಅಂತ ಬಿಜೆಪಿ ನಾಯಕರು ಹೇಳುತ್ತಾರೆ ಅನ್ನೋದಾದ್ರೇ, ದೇಶದ ಜನರಿಗೆ ಮೋದಿ ಯಾರೂ ಎಂದೇ ಗೊತ್ತಿಲ್ಲ ಎಂದಂತಾಯಿತು - ಹೀಗೆ ಬಿಜೆಪಿ ನಾಯಕರ ವ್ಯಂಗ್ಯವಾಡಿದ್ದು ಆಹಾರ ಸಚಿವ ಯು.ಟಿ. ಖಾದರ್!
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು, ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು ಎಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಹೇಳಿದ್ದಾರೆ. ಆದರೆ ಆಹಾರ ಭದ್ರತಾ ಕಾಯ್ದೆ ತಂದ ಯುಪಿಎ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆಯ ಕ್ರೆಡಿಟ್ ಸಲ್ಲಬೇಕು. ಆಹಾರ ಭದ್ರತಾ ಕಾಯ್ದೆ ಜಾರಿಯಾಗುವ ಮುನ್ನವೇ ಅನ್ನಭಾಗ್ಯ ಯೋಜನೆ ಘೋಷಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಈ ಯೋಜನೆಯ ಕ್ರೆಡಿಟ್ ಸಲ್ಲಬೇಕು. ಈ ಯೋಜನೆಗೆ ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 24 ರೂಪಾಯಿ ಕೊಡ್ತಿರೋದು ನಿಜ. ಹಾಗೇ ನಾವು ಪ್ರತಿ ಕೆಜಿ ಅಕ್ಕಿಗೆ ಮೂರು ರೂ ನೀಡುತ್ತಿರುವುದೂ ನಿಜ. ಆದರೆ ಈ ಯೋಜನೆ ಮೂಲ ಯುಪಿಎ ಸರ್ಕಾರ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆ ಅಂತ ಖಾದರ್ ವಿಶ್ಲೇಷಿಸಿದ್ರು.
