ಮದುವೆಗೆ ಬಾಕ್ಸ್ ಗಣಿ ಧಣಿಯವರ ಮಾದರಿಯ ಲಕ್ಷಾಂತರ ಆಮಂತ್ರಣ ಪತ್ರಿಕೆಗಳು ವಿತರಿಸಲಾಗಿದೆ. ಮದುವೆಗೆ ಇಡೀ ರಾಜ್ಯ ಸರ್ಕಾರವೇ ಪಾಲ್ಗೊಳ್ಳುವ ಸಾಧ್ಯತೆಯಿದೆ
ಬೆಂಗಳೂರು(ನ.16): ಇಂದು ತಾನೆ ಗಣಿ ಧಣಿ ಜನಾರ್ದನ ರೆಡ್ಡಿ ಅವರ ಪುತ್ರಿಯ ಮದುವೆಯನ್ನು ಅರಮನೆ ಮೈದಾನದಲ್ಲಿ ವೈಭವಪೂರತವಾಗಿ ಮಾಡಿದ್ದನ್ನು ನೋಡಿದೆವು. ಈಗ ಮತ್ತೊಬ್ಬ ಸಚಿವರು ಹಾಗೂ ಅಗರ್ಭ ಶ್ರೀಮಂತರಾದ ರಮೇಶ್ ಜಾರಕಿಹೋಳಿ ಅವರ ಪುತ್ರ ಸಂತೋಷ್ ಅವರ ಮದುವೆಗೆ ಅದ್ದೂರಿ ತಯಾರಿ ಬೆಳಗಾವಿಯ ಗೋಕಾಕ ನಗರ ಮಯೂರ ಶಾಲೆ ಆವರಣದಲ್ಲಿ ನಡೆಯುತ್ತಿದೆ.
ರಮೇಶ್ ಜಾರಕಿಹೊಳಿ ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು. ಮೂವರು ಶಾಸಕರಿರುವ ಪ್ರಭಾವಿ ರಾಜಕೀಯ ಮನೆತನವಿದು. ಒಬ್ಬರು ರಮೇಶ್ ಜಾರಕಿಹೊಳಿ ಮತ್ತೊಬ್ಬರು ಬಾಲಚಂದ್ರ ಜಾರಕಿಹೊಳಿ. ಸಚಿವ ರಮೇಶ್ ಜಾರಕಿಹೊಳಿ ಪುತ್ರ ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕರಡಿಗುಡ್ಡದ ಅಂಬಿಕಾ ಅವರನ್ನು ನ.21 ರಂದು ವರಿಸಲಿದ್ದಾರೆ.
ಸಾವಿರಕ್ಕೂ ಹೆಚ್ಚು ಪೊಲೀಸರು
ಮದುವೆಗೆ ಬಾಕ್ಸ್ ಗಣಿ ಧಣಿಯವರ ಮಾದರಿಯ ಲಕ್ಷಾಂತರ ಆಮಂತ್ರಣ ಪತ್ರಿಕೆಗಳು ವಿತರಿಸಲಾಗಿದೆ. ಮದುವೆಗೆ ಇಡೀ ರಾಜ್ಯ ಸರ್ಕಾರವೇ ಪಾಲ್ಗೊಳ್ಳುವ ಸಾಧ್ಯತೆಯಿದೆ. ಆದ ಕಾರಣ 5 ಡಿಎಸ್ಪಿ,16 ಸಿಸಿಐ,40ಪಿಎಸ್ಐ, 68 ಎಎಸ್ಐ, 640 ಪೇದೆಗಳು, 3 ಕೆಎಸ್'ಆರ್'ಪಿ ತುಕಡಿಗಳು ಭದ್ರತೆಗಾಗಿ ನಿಯೋಜನೆಗೊಳ್ಳಲಿವೆ. ಭದ್ರತೆಯನ್ನು ಸ್ವತಃ ಜಿಲ್ಲಾ ವರಿಷ್ಟಾಧಿಕಾರಿ ಡಾ.ಬಿ.ಆರ್. ರವಿಕಾಂತೇಗೌಡ ಪರಿಶೀಲಿಸಿದ್ದಾರೆ.
2 ಹೆಲಿಪ್ಯಾಡ್,ನಾನಾ ಕಡೆ ಪಾರ್ಕಿಂಗ್
ಕೇಂದ್ರ ಹಾಗೂ ರಾಜ್ಯದಿಂದ ಅತೀ ಗಣ್ಯ ವ್ಯಕ್ತಿಗಳು ಆಗಮಿಸುವುದರಿಂದ 2 ಕಡೆ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ನಗರದ ನಾನಾ ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮಾದರಿಯ ವೇದಿಕೆಯಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ. ಊಟಕ್ಕಾಗಿ ಹೊರ ರಾಜ್ಯದ ಅಡುಗೆಯರನ್ನು ಕರೆಸಲಾಗಿದೆ.
