ನಮ್ಮ ಸಾಧನೆಯನ್ನ ಜನರಿಗೆ ತಲುಪಿಸುತ್ತಿದ್ದೇವೆ. ಆದರೆ ಗೌಡರು ನನ್ನ ಮಗ ಕುಮಾರಣ್ಣ ಮುಖ್ಯಮಂತ್ರಿಯಾದರೆ ಸಾಧನೆ ಮಾಡುತ್ತಾನೆ ಅಂತಾ ಹೇಳ್ತಿದ್ದಾರೆ
ಹಾಸನ(ಡಿ.03): ನಾವು ಮಾಡಿದ ಸಾಧನೆಯನ್ನ ಹೇಳಿಕೊಳ್ಳುತ್ತಿದ್ದೇವೆ ಹೊರತು ಮಾಡಿರದ ಸಾಧನೆಯನ್ನಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಸಚಿವ ಎ. ಮಂಜು ಟಾಂಗ್ ನೀಡಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಮಾತನಾಡಿದ ಸಚಿವ ಎ ಮಂಜು, ನಾವು ಪ್ರಣಾಳಿಕೆಯಲ್ಲಿ ಜನರಿಗೆ ಕೊಟ್ಟ ಎಲ್ಲಾ ಮಾತುಗಳನ್ನ ಉಳಿಸಿಕೊಂಡಿಸಿದ್ದೇವೆ, ಪೂರೈಸಿದ್ದೇವೆ. ನಮ್ಮ ಸಾಧನೆಯನ್ನ ಜನರಿಗೆ ತಲುಪಿಸುತ್ತಿದ್ದೇವೆ. ಆದರೆ ಗೌಡರು ನನ್ನ ಮಗ ಕುಮಾರಣ್ಣ ಮುಖ್ಯಮಂತ್ರಿಯಾದರೆ ಸಾಧನೆ ಮಾಡುತ್ತಾನೆ ಅಂತಾ ಹೇಳ್ತಿದ್ದಾರೆ. ನಾವು ನಮ್ಮ ಮುಖ್ಯಮಂತ್ರಿಯನ್ನು ಮಾಡಿರೋದಕ್ಕೆ ನಮ್ಮ ಸಾಧನೆಯನ್ನ ಹೇಳಿಕೊಳ್ಳುತ್ತಿದ್ದೇವೆ ಅದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡಿದರು.
ನಾಳೆ ಜೆಡಿಎಸ್ ತವರೂರು ಹಾಸನ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಜಿಲ್ಲೆಯ ಮೂರು ಕಡೆ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
