ಕನ್ನಡಿಗರ, ಕೊಡವರ ಮನಸ್ಸನ್ನು ನೋಯಿಸುತ್ತಿರುವ ಕೇಂದ್ರ
ಕೇಂದ್ರ ಸರ್ಕಾರ ಕನ್ನಡಿಗರ, ಕೊಡಗಿನ ಜನರ ಮನಸ್ಸನ್ನು ನೋಯಿಸಬಾರದು.ತಾರತಮ್ಮ ಮಾಡುವುದನ್ನು ನಿಲ್ಲಿಸಿ ರಾಜ್ಯದ ಜನರಲ್ಲಿ ಭರವಸೆ ಮೂಡಿಸುವ ಕೆಲಸವನ್ನು ಮಾಡಬೇಕು.
ಉಡುಪಿ[ಆ.20]: ಕೇಂದ್ರ ತನ್ನ ರಾಜಕೀಯ ಬದಿಗಿಟ್ಟು ಪರಿಹಾರ ಘೋಷಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಉಡುಪಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕನ್ನಡಿಗರ, ಕೊಡಗಿನ ಜನರ ಮನಸ್ಸನ್ನು ನೋಯಿಸಬಾರದು.ತಾರತಮ್ಮ ಮಾಡುವುದನ್ನು ನಿಲ್ಲಿಸಿ ರಾಜ್ಯದ ಜನರಲ್ಲಿ ಭರವಸೆ ಮೂಡಿಸುವ ಕೆಲಸವನ್ನು ಮಾಡಬೇಕು. ಈಗಾಗಲೇ ತಾವು ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ ಎಂಬ ಭಾವನೆ ಕೊಡವರಲ್ಲಿ ಮೂಡಲು ಶುರುವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೇವಣ್ಣನವರ ಬಗ್ಗೆ ಮಾಹಿತಿಯಿಲ್ಲ
ಸಚಿವ ರೇವಣ್ಣ ಬಿಸ್ಕೆಟ್ ಎಸೆದ ಪ್ರಕರಣಕ್ಕೆ ಸಂಬಧಿಸಿದ ಬಗ್ಗೆ ಮಾತನಾಡಿ, ನನಗೆ ಘಟನೆ ಬಗ್ಗೆ ಯಾವುದೇ ಮಾಹಿತಿಯಿಲ್ಲ.ಮಾಹಿತಿಯಿಲ್ಲದೆ ಪ್ರತಿಕ್ರಿಯೆ ನೀಡುವುದು ತಪ್ಪು. ಇದು ಆಕಸ್ಮಿಕವಾಗಿ ನಡೆದ ಘಟನೆ ಆಗಿರಬಹುದು. ಉದ್ದೇಶ ಪೂರ್ವಕವಾಗಿ ನಡೆದಂತಿಲ್ಲ.
ಇನ್ನು ಸಿಎಂ ಯಾರು ಎಂಬ ಬಗ್ಗೆ ನಮಗೆ ಗೊಂದಲವಿಲ್ಲ. ಮೀಡಿಯಾದವರು ಈತರದ ಗೊಂದಲ ಮಾಡಿಕೊಳ್ಳುತ್ತಾರೆ. ಸಂವಿಧಾನ ಪ್ರಕಾರ ಪ್ರಮಾಣವಚನ ಸ್ವೀಕರಿಸಿದವರು ಸಿಎಂ ರೇವಣ್ಣ ಉತ್ಸಾಹದಿಂದ ಕೆಲಸ ಮಾಡುವಾಗ ಹೀಗೆ ಅನ್ನಿಸಿರಬಹುದು ಎಂದು ಅನುಮಾನಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು.