ಇತ್ತೀಚೆಗೆ ನಡೆದಿದ್ದ ಜುಬೈರ್ ಹತ್ಯೆಯ ಹಿನ್ನೆಲೆಯಲ್ಲಿ ಮೃತರ ಮನೆಗೆ ಭೇಟಿ ನೀಡಲು ಬಂದ ಸಚಿವ ಯು.ಟಿ. ಖಾದರ್ ಅವರನ್ನು ಉದ್ರಿಕ್ತ ಗುಂಪು ಘೇರಾವ್ ಹಾಕಿದ್ದಲ್ಲದೇ ಅರ್ಧ ಕಿ.ಮೀ. ದೂರ ತಳ್ಳಿಕೊಂಡೇ ವಾಪಾಸ್ ಕಳುಹಿಸಿದ ಘಟನೆ ಮುಕ್ಕಚ್ಚೇರಿ ಬಳಿ ಶುಕ್ರವಾರ ಸಂಜೆ ವೇಳೆ ನಡೆದಿದೆ.

ಉಳ್ಳಾಲ: ಇತ್ತೀಚೆಗೆ ನಡೆದಿದ್ದ ಜುಬೈರ್ ಹತ್ಯೆಯ ಹಿನ್ನೆಲೆಯಲ್ಲಿ ಮೃತರ ಮನೆಗೆ ಭೇಟಿ ನೀಡಲು ಬಂದ ಸಚಿವ ಯು.ಟಿ. ಖಾದರ್ ಅವರನ್ನು ಉದ್ರಿಕ್ತ ಗುಂಪು ಘೇರಾವ್ ಹಾಕಿದ್ದಲ್ಲದೇ ಅರ್ಧ ಕಿ.ಮೀ. ದೂರ ತಳ್ಳಿಕೊಂಡೇ ವಾಪಾಸ್ ಕಳುಹಿಸಿದ ಘಟನೆ ಮುಕ್ಕಚ್ಚೇರಿ ಬಳಿ ಶುಕ್ರವಾರ ಸಂಜೆ ವೇಳೆ ನಡೆದಿದೆ.

Add Asianetnews Kannada as a Preferred SourcegooglePreferred

ಸಚಿವರಿದ್ದ ವಾಹನದ ಮೇಲೆ ಗುಂಪು ಕಲ್ಲು ತೂರಾಟ ನಡೆಸಿದರೂ ಯಾವುದೇ ಹಾನಿಯಾಗಿಲ್ಲ. ಅ.4ರಂದು ಮುಕ್ಕಚ್ಚೇರಿ ನಿವಾಸಿ ಜುಬೈರ್‌ರನ್ನು ಹತ್ಯೆ ಮಾಡಿದ್ದರ ಹಿಂದೆ ಕಾಂಗ್ರೆಸ್ ಮುಖಂಡನ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು.

ಈ ನಡುವೆ ಜುಬೈರ್ ಅಂತ್ಯಕ್ರಿಯೆಯಲ್ಲಿ ಖಾದರ್ ಭಾಗವಹಿಸದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸ್ ಭದ್ರತೆಯಲ್ಲಿಯೇ ತೆರಳಿದ ಖಾದರ್, ಜುಬೈರ್ ಕುಟುಂಬಸ್ಥರನ್ನು ಭೇಟಿಯಾಗಲು ಅವಕಾಶ ನೀಡದೇ ಅವರನ್ನು ಅರ್ಧ ಕಿ.ಮೀ. ದೂರ ತಳ್ಳಿಕೊಂಡೇ ಹಿಂದಕ್ಕೆ ಕಳುಹಿಸಿದರು.