ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಶುರುವಾಗಿದೆ ಸಂಕಷ್ಟ; ಜಾರ್ಜ್'ಗೆ ಮುಳುವಾಗಲಿದೆಯಾ ಡಿವೈಎಸ್ಪಿ ಗಣಪತಿ ಕೇಸ್?

First Published 10, Feb 2018, 9:11 AM IST
Minister K J George Facing Problem
Highlights

ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಸಂಕಷ್ಟ ಶುರುವಾಗಿದೆ.  ಕೆಲ ಸಚಿವರಿಗೆ ಐಟಿ, ಇಡಿ ಹಾಗೂ ಸಿಬಿಐ ಭೂತ ಕಾಡಲಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಾಗ ಇದು ಸಿದ್ದರಾಯಯ್ಯ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಡಿಕೆಶಿಗೆ ಇಡಿ ಭಯವಾದರೆ  ಕೆ.ಜೆ.ಜಾರ್ಜ್​'ಗೆ ಸಿಬಿಐ ಭಯ ಎದುರಾಗಿದೆ.  ಜಾರ್ಜ್​​ಗೆ ಮುಳುವಾಗಲಿದೆ ಡಿವೈಎಸ್​​​ಪಿ ಗಣಪತಿ ಪ್ರಕರಣ ಎನ್ನಲಾಗುತ್ತಿದೆ.

ಬೆಂಗಳೂರು (ಫೆ.10): ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಸಂಕಷ್ಟ ಶುರುವಾಗಿದೆ.  ಕೆಲ ಸಚಿವರಿಗೆ ಐಟಿ, ಇಡಿ ಹಾಗೂ ಸಿಬಿಐ ಭೂತ ಕಾಡಲಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಾಗ ಇದು ಸಿದ್ದರಾಯಯ್ಯ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಡಿಕೆಶಿಗೆ ಇಡಿ ಭಯವಾದರೆ  ಕೆ.ಜೆ.ಜಾರ್ಜ್​'ಗೆ ಸಿಬಿಐ ಭಯ ಎದುರಾಗಿದೆ.  ಜಾರ್ಜ್​​ಗೆ ಮುಳುವಾಗಲಿದೆ ಡಿವೈಎಸ್​​​ಪಿ ಗಣಪತಿ ಪ್ರಕರಣ ಎನ್ನಲಾಗುತ್ತಿದೆ.

ತೀವ್ರಗೊಂಡಿದೆ ಡಿವೈಎಸ್​ಪಿ ಗಣಪತಿ ಕೇಸ್

ಡಿವೈಎಸ್​ಪಿ ಗಣಪತಿ  ಕೇಸಿನ ಸಂಪೂರ್ಣ ಮಾಹಿತಿಯನ್ನು  ಸಿಬಿಐ ಅಧಿಕಾರಿಗಳು ಕಲೆ ಹಾಕಿದ್ದಾರೆ.  ಎಫ್'​​​ಐಆರ್​ ದಾಖಲಿಸಿ ತನಿಖೆ ನಡೆಸಿದ್ದ ಅಧಿಕಾರಿಗಳ ವಿಚಾರಣೆ ಮುಕ್ತಾಯಗೊಂಡಿದೆ.  ನ್ಯಾ.ಕೇಶವ ನಾರಾಯಣ್​​ ಆಯೋಗ ಹಾಗೂ ಸಿಬಿಐ ಬಿ ರಿಪೋರ್ಟ್​​​ ಪರಿಶೀಲನೆ ಕೂಡಾ ಮುಕ್ತಾಯವಾಗಿದೆ.

ಜಾರ್ಜ್​​ ಬಂಧನಕ್ಕೆ ಮೂಹುರ್ತ ಫಿಕ್ಸ್​...!

ಗಣಪತಿ ಪತ್ನಿ ಪವನಾ, ಪುತ್ರ ನೇಹಾಲ್​​ ಸೇರಿ ಕುಟುಂಬಸ್ಥರ ಹೇಳಿಕೆಯನ್ನು ಸಿಬಿಐ ಪಡೆದಿದೆ.  ಗಣಪತಿ ಸೇವಾವಧಿಯಲ್ಲಿ ಜಾರ್ಜ್ ತೊಂದರೆ ನೀಡಿದ್ದಾರೆ ಎನ್ನಲಾಗಿದೆ. ಪ್ರಮುಖ ಆರೋಪಿಗಳಾದ ಕೆ.ಜೆ.ಜಾರ್ಜ್​​, ಪ್ರಣಬ್​ ಮೊಹಂತಿ ಹಾಗೂ ಎ.ಎಂ ಪ್ರಸಾದ್​'ಗೆ ನೋಟಿಸ್​  ನೀಡಿದ್ದಾರೆ.  ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದಾರೆ. ಫೆಬ್ರವರಿ ಅಂತ್ಯದೊಳಗೆ ಸಚಿವ ಕೆ.ಜೆ. ಜಾರ್ಜ್​​ಗೆ ಸಂಕಷ್ಟ ಎದುರಾಗಲಿದೆ.  ಎಲ್ಲಾ ಸಾಕ್ಷ್ಯಗಳನ್ನು ಸಿಬಿಐ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

loader