ಬೆಂಗಳೂರು :  ಕನ್ನಡ ಮತ್ತು ಸಂಸ್ಕೃತಿ ಖಾತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರಾದ ಡಾ. ಜಯಮಾಲಾ ಅವರನ್ನು ಸಂಪುಟದಿದ ಕೈ ಬಿಡುವ ಬಗ್ಗೆ ತೀವ್ರ ಚರ್ಚೆಯಾದರೂ ಸಂಪುಟ ವಿಸ್ತರಣೆ ವೇಳೆ ಜಯಮಾಲಾ ಬಚಾವಾಗಿದ್ದಾರೆ. 

ಜಯಮಾಲಾ ಅವರಿಗೆ ಸಚಿವ ಸ್ಥಾನ ದೊರೆತಾಗಲೇ ಕಾಂಗ್ರೆಸ್‌ನ ಹಲವರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಲಕ್ಷ್ಮೇ ಹೆಬ್ಬಾಳ್ಕರ್‌ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. 

ಇದೀಗ ಶಾಸಕಿಯೊಬ್ಬರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಜಯಮಾಲಾ ಅವರನ್ನು ಕೈಬಿಡಲಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಜಯಾ​ಮಾಲಾ ಅವ​ರನ್ನು ಸಂಪು​ಟ​ದಿಂದ ಕೈಬಿಟ್ಟು ಅವರ ಬದ​ಲಿಗೆ ಲಕ್ಷ್ಮೇ ಹೆಬ್ಬಾ​ಳ​ಕರ್‌ ಅಥವಾ ಅಂಜಲಿ ನಿಂಬಾ​ಳ್ಕರ್‌ ಅವ​ರಿಗೆ ಅವ​ಕಾಶ ನೀಡ​ಲಾ​ಗು​ತ್ತದೆ ಎಂದು ಹೇಳ​ಲಾ​ಗಿ​ತ್ತು. 

ಆದರೆ, ರಾಜ್ಯ ಉಸ್ತು​ವಾರಿ ಕೆ.ಸಿ.ವೇಣು​ಗೋ​ಪಾಲ್‌, ಸಿದ್ದ​ರಾ​ಮಯ್ಯ ಹಾಗೂ ಬಿ.ಕೆ. ಹರಿ​ಪ್ರ​ಸಾದ್‌ ಅವರ ಸಂಘ​ಟಿತ ಪ್ರಯ​ತ್ನದ ಫಲ​ವಾಗಿ ಜಯ​ಮಾಲಾ ಅವರು ಖಾತೆ ಉಳಿ​ದು​ಕೊಂಡಿದೆ ಎಂದು ಮೂಲ​ಗಳು ತಿಳಿ​ಸಿ​ವೆ.