ಹಾಸನ[ಜೂ. 25]  ನಾನು ಕೂಡ ಗ್ರಾಮವಾಸ್ತವ್ಯದ ಯೋಚನೆ ಮಾಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಎಚ್​.ಡಿ ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿ, ಗ್ರಾಮ ವಾಸ್ತವ್ಯ ಮಾಡುವ ಸಂಬಂಧ ಅಧಿಕಾರಿಗಳ ಸಭೆ ಕರೆಯುತ್ತೇನೆ. ಹಳ್ಳಿಗಳ ಪಟ್ಟಿ ತೆಗೆದುಕೊಂಡು ಅದರ ವಸ್ತು ಸ್ಥಿತಿ ಆಧಾರದಲ್ಲಿ ತೆರಳುತ್ತೇನೆ ಎಂದು ತಿಳಿಸಿದರು.

ಹಾಸನ  ಜಿಲ್ಲೆಯ ಇಒ, ಪಿಡಿಒ ಗಳ ಜೊತೆ ಸಚಿವ ರೇವಣ್ಣ ಸಭೆ ನಡೆಸಿದರು. ನಿಮ್ಮ ಸಮಸ್ಯೆ ಹೇಳಿ, ಸಿಎಂ ಜೊತೆ ಮಾತಾಡುವೆ , ಸದನದಲ್ಲಿ ಚರ್ಚಿಸುವೆ ಎಂದು ರೇವಣ್ಣ ಹೇಳಿಕೆ ಅಧಿಕಾರಿಗಳ ಬಳಿ ಕೇಳಿಕೊಂಡರು.  ಉತ್ತಮ ಕೆಲಸ ಮಾಡಿ, ರಾಜ್ಯದಲ್ಲಿ ನಾವೇ ನಂ ಒನ್ ಇರಬೇಕು ಎಂದು ಪಿಡಿಒ ಗಳಿಗೆ ರೇವಣ್ಣ ಕ್ಲಾಸ್ ತೆಗೆದುಕೊಂಡರೆ ಅಧಿಕಾರಿಗಳು ಮಾತ್ರ ಇದ್ಯಾವುದು ತಮಗೆ ಸಂಬಂಧವೇ ಇಲ್ಲ ಎಂಬ ರೀತಿ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು.

ಕುಮಾರಣ್ಣ ಆಯ್ತು ಈಗ ಗ್ರಾಮ ವಾಸ್ತವ್ಯಕ್ಕೆ ಪರಂ, ರೇವಣ್ಣ ರೆಡಿ!

2006ರಲ್ಲಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಮೊದಲಿಗೆ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಸಂದರ್ಭದಲ್ಲಿ ಕಾರ್ಯಕ್ರಮ ತುಂಬಾ ಜನಪ್ರಿಯತೆ ಪಡೆದುಕೊಂಡಿತ್ತು. ಇದೀಗ ಮತ್ತೆ ಸಿಎಂ ಪದವಿ ಏರಿರುವ ಕುಮಾರಸ್ವಾಮಿ ಶಾಲಾ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.